ಮನಸಿಗ ಒಂಬತ್ತರ ಬಸುರಿ !!
ಕವನ
ಬರೆಯಲಾಗುತ್ತಿಲ್ಲ ಈಗೀಗ
ನನಗೆ ಕವನ
ಮೊದಮೊದಲು ಸುಮ್ಮನೆ
ಗೀಚುತ್ತಿದ್ದೆ ಬೆಂಗಳೂರ
ಗಿಜಿಗಿಜಿ ಗಿಟ್ಟುವ ಟ್ರಾಫಿಕ್ ನಲೂ
ಆಟೋಗಳ ಗರಗರ ಸೌಂಡ್ ನಲೂ
ಸಿಟಿ ಬಸ್ ಗಳ ಅಬ್ಬರದಲೂ
ಆದರೀಗ ..........
ಪಚ್ಚಿಮ ಘಟ್ಟದ ತಪ್ಪಲಿಗೆ ಹೋಗಿ
ಕೊರೆಯುವ ಚಳಿಗೆ ಮೈ ಯೋಡ್ಡಿ
ಮಂಜು ಮೈಮೇಲೆ ಮುಗಿದುಬಿದ್ದರೂ
ಹಕ್ಕಿಗಳ ಕಲರವ ಗಾನ ಕೇಳಿ
ಸಮುದ್ರ ತೀರದ ಧೈತ್ಯ ಅಲೆಗಳ
ಅದುರು ನಿಂತು ಸೂರ್ಯಾಸ್ತ
ನೋಡಿದ ಮೇಲೂ
ಬರೆಯಲಾಗುತ್ತಿಲ್ಲ ನನಗೀಗ
ಕವ-
-ನ
ಏನಾಯಿತು ? ನನ್ನೊಳಗಿನ ಕವಿಗೆ ?
ಅನುಭಾವದ ಶೂನ್ಯತೆ ಯೋ ?
ಮಬ್ಬು ಹಿಡಿದ ಮೆದಳೋ ?
ಗೊತ್ತಾಗದೇ ಚಡ-
-ಪಡಿಸುತ್ತಿದ್ದೇನೆ
ಕವನ ಬರಿಯಲೇ ಬೇಕು
ನಾನೀಗ
ಕೊಲೆ ಮಾಡುವ ಮನಸಿಲ್ಲ
ಈ ಮನಸಿಗೆ
ನನ್ನೊಳಗಿನ ಕವಿಗೆ ಮತ್ತೆ
ಜೀವ ತುಂಬಾ ಬೇಕಾ-
-ಗಿದೆ
ಕಲ್ಪನೆಗಳು ಕಮರಿವೆ
ಕನಸುಗಳು ಕಂಗೆಟ್ಟಿವೆ
ಮತ್ತೆ ಪ್ರಸವ ವೇದನೆ-
-ಯ ಸಮಯ
ಮನಸಿಗ ಒಂಬತ್ತರ
ಬಸುರಿ
ಹುಟ್ಟಿ ಬಿಡಲಿ ಮತ್ತೊಮ್ಮೆ
ಸತ್ತು ಬದುಕುವೆ !!