ವಿಫಲ ಪ್ರೇಮದ ನಂತರ !

ವಿಫಲ ಪ್ರೇಮದ ನಂತರ !

ಕಣ್ಣ ಮುಚ್ಚಿದೆ .ಕಣ್ಣಮುಂದೆ ಕತ್ತಲು . ಅವಳ ನೆನಪಿಸಿಕೊಂಡೆ .
ಆದರೀಗ ಅವಳ ಮುಖದ ಬದಲು ,ನಾನು ಆವಳಿಗಾಗಿ ಅತ್ತ ನನ್ನ ಕಣ್ಣಿರು ಕಂಡಿತು .
ಮೊಬೈಲ್ ನಲ್ಲಿ ಅವಳ ನಂಬರ್ ಡಿಲೀಟ್ ಮಾಡಿದೆ .
ಮತ್ತೆ ಕಣ್ಣು ಮುಚ್ಚಿದೆ .ಮುಗಳ್ನಗೆ ನಕ್ಕೆ .
ಅವಳೇ ಜಗತ್ತೆಂದು ಅಂದುಕೊಂಡಿದ್ದ ನನಗೆ , ಈಗ ಕಂಡಿತ್ತು ನಿಜವಾದ ಜಗತ್ತು !
ಅದರ ವಿಶಾಲತೆಯ ಮುಂದೆ ಅವಳು ತೀರಾ ಕುಬ್ಜೆ . ನನ್ನ ಪ್ರೇಮವು ಕೂಡ . ಅದರ ವೈಫಲ್ಯವೂ !
ಎದ್ದು ನಿಂತೆ .
ಜೀವನ ಅಂದ್ರೆ ಅವಳು , ನನ್ನ ಪ್ರೀತಿ , ಅವಳ ತಿರಸ್ಕಾರ ಅಷ್ಟೇ ಅಲ್ಲ ....
ಇನ್ನು ಇದೆ ... ತುಂಬಾ ಇದೆ .... ಏನೋ ಇದೆ ... ಏನದು ಅಂತ ಹುಡುಕ ಹೊರಟೆ ...
ಮನಸು ಖುಷಿಯಾತು .

Comments