ಕಥೆ ಬರೆಯಲು ಹೋದವನ ಕಥೆ !
ಮೊನ್ನೆ ಹೀಗೆಯೇ ಸಕಲೇಶಪುರಕ್ಕೆ ಹೋಗಿದ್ದೆ ಸ್ಪೂರ್ತಿ( ಹುಡುಗಿಯಲ್ಲ ರೀ !)ಯನ್ನ ಹುಡುಕಿಕೊಂಡು ಒಂದು ಕಥೆ ಬರೆಯಲಿಕ್ಕೆ .
ಮಳೆಯ ಕುರಿತು ಒಂದು ಕಥೆ ಬರೆದರೆ ಹೇಗೆ ?
"ಅವನು ಬಯಲು ಸೀಮೆಯ ಹುಡುಗ . ಮಲೆನಾಡಿಗೆ ಬಂದ . ಮಳೆಯ ಸೊಬಗ ನೋಡುತ ನಿಂತ . ಎಲ್ಲಿ ನೋಡಿದರಲ್ಲಿ ಜಿಟಿ ಜಿಟಿ ಮಳೆ . ಹಚ್ಹ ಹಸಿರು . ಮಂಗಳೂರ ಹೆಂಚುಗಳು . ಹೆಂಚಿನ ಮೇಲೆ ಪಾಚಿ . ದೊಡ್ಡ ದೊಡ್ಡ ಮರಗಳು . ಮರದ ರೆಂಬೆ ಕೊಂಬೆ ಯ ಮೇಲೆಲೆಲ್ಲ ಹಸಿರು ಪಾಚಿ . ಅಲ್ಲೊಂದು ಇಲ್ಲೊಂದು ಮನೆಗಳು . ಮನೆಯ ಗೋಡೆಯ ಮೇಲೂ ಪಾಚಿ . ಅಬ್ಬ ! ಪಾಚಿ ಸಾಮ್ರಾಜ್ಯ ! "
ಇದೇನು ಮಳೆಯ ಕುರಿತ ಕಥೆಯೋ ಪಾಚಿ ಕುರಿತ ಕಥೆಯೋ ? ಬೇಡ ಅಂತ ಅನಿಸಿ ಸುಮ್ಮನಾದೆ .
ಮತ್ತೆ ಏನು ಕಥೆ ಬರೆಯಲಿ ? ಯೋಚಿಸಿದೆ ಯೋಚಿಸಿದೆ ... ಯೋಚಿಸುತ್ತಲೇ ಇದ್ದೆ .
ಮಂಜರಾಬಾದ್ ಕೋಟೆ ನೋಡಲು ಹೋದೆ .. ಮೆಟ್ಟಿಲು ಹತ್ತಿತಿರುವಾಗ ಎದುರಾದ ಸುಂದರ ಹುಡುಗಿಯೊಬ್ಬಳ ನೋಡಿ , 'ಕವನ' ವೇನೂ ಮನಸಿನಲಿ ಮೂಡಿತು .. ಆದ್ರೆ ನಾನೀಗ ಬರಿಯಬೇಕಗಿರೋದು ಕಥೆ ಅಲ್ಲವಾ ಅಂತ ಅನಿಸಿ ಸುಮ್ಮನಾದೆ .
ಒಂದು ಒಳ್ಳೆಯ Suspense Thriller ಬರೆದರೆ ಹೇಗೆ ?
"ಅವನು ,ಸಾಯಬೇಕೆಂದೇ ಆ ಕೋಟೆಯ ಮೇಲೆ ಹತ್ತಿ ಬಂದಿದ್ದ . ಕಣ್ಣೆದುರಿಗೆ ಬೃಹತ್ ಬೆಟ್ಟಗಳು . ಅಲ್ಲಿಲ್ಲಿ ಮಂಜು . ಕೆಳಗಡೆ ನೋಡಿದ . ದೊಡ್ಡ ಪ್ರಪಾತ . ಕಣ್ಣ ಮುಚ್ಚಿ , ಇನ್ನೋನು ಹಾರಬೇಕು , ಅವನ ಮೊಬೈಲ್ ರಿಂಗ ಆಯಿತು ...
'ಹಲೋ'
'ಹಲೋ'
'ನಾನು ಕಣೋ , ದಿವ್ಯಾ ಮಾತಾದುತಿರೋದು'
'.......'
'ನಿಜ ಕಣೋ.... ನೀನು ಹೇಳಿದ್ದೆ ನಿಜ... ಬೇಗ ಬಾ ಡಂಬು ... I miss you ... and off course ... I Love you ... idiot ! ನಾಳೆ ಬೆಳಿಗ್ಗೆ same ಟೈಮ್.... same ಪ್ಲೇಸ್ ... ಕಾಯ್ತಾ ಇರ್ತೀನಿ . ಬೇಗ ಬಂದುಬಿಡು ! '
'......'
ಆ ಕಡೆ ಮೊಬೈಲ್ disconnect ಆಗಿತ್ತು
ಸಾಯಬೇಕೆಂದು ಬಂದಿದ್ದ ರಮೇಶ್ ನ ಮನಸಿನಲ್ಲಿ ಆಲೋಚನೆಗಳ ಮಹಾಪುರ . ಏನ್ ಮಾಡೋದು ? ಸಾವೋ ? ಮರಳಿ ಮನೆಗೋ ? ಗೊತ್ತಾಗದೆ ಯೋಚಿಸುತಿದ್ದ ...
ರಮೇಶನ ಮನಸಿನಲ್ಲಿ ಏನಾಯಿತೋ ಗೊತ್ತಿಲ್ಲ . ನನಗೆ suspense thriller ಬರಿಯೋ ಮೂಡು ಎಗರಿ ಪ್ರಪಾತಕ್ಕೆ ಬಿತ್ತು !
ಅಯ್ಯೋ ರಾಮ , ಮತ್ತ್ಯಾವ ಕಥೆ ಬರಿಯಲಿ ನಾನು ಗೊತ್ತಾಗದೆ ಚಡಪಡಿಸಿದೆ .
ಅಲ್ಲಿಂದ ಸೀದಾ Bisile ghat view point ಗೆ ಬಂದೆ . ಏನೇ ಆಗಲಿ... ಅಲ್ಲಿ ಕುಳಿತು ಕಥೆ ಬರೆದು ಮುಗಿಸಿಬೇಕು ....
"ಅವನು ಒಬ್ಬ ಕಥೆಗಾರ . ಕಥೆ ಬರಿಯಲೆಂದೇ ಸುಮಾರು ದೂರದಿಂದ bisile ghat ಗೆ ಬಂದಿದ್ದ . ತಲೆಯ ತುಂಬಾ ಕಥಾವಸ್ತುಗಳೇ . ಕಥಾಪಾತ್ರಗಳೇ . ಎಲ್ಲಿಂದ ಹೆಣೆಯಬೇಕು ಕಥೆನಾ . ಎದುರಿಗೆ ನೋಡಿದ . ಬೃಹತ್ ಬೆಟ್ಟ . ಮಂಜು . ಜಲಪಾತಗಳ ಸದ್ದು . ತುಂತುರು ಮಳೆ .. ಪೆನ್ನು ಕೈಗೆತ್ತಿಕೊಂಡು ಬರಯತೊಡಗಿದ ... ಬರೆದ ... ಬರೆದ .... ಬರೆಯುತ್ತಲೇ ಇದ್ದ !"
ನನ್ನ ಕಥೆಯ ಕಥಾನಾಯಕ ಒಬ್ಬ ಕಥೆಗಾರ . ಅವನೇನೋ ಕಥೆ ಬರೆಯಲು ಶುರುವಿಟ್ಟುಕೊಂಡ . ಬರೆದು ಮುಗಿಸುವತನಕ ನಾನೇನು ಮಾಡಲಿ ?
ಕಾಯಬೇಕು ... ಅವನ ಕಥೆ ಮುಗಿದರೆ ನನ್ನ ಕಥೆಯೂ ಮುಗಿದಂತೆ ಅಲ್ಲವೇ ?
ಆವನು ಅಲ್ಲಿ ಬರೆಯುತ್ತಿದ್ದಾನೆ ... ನಾನಿಲ್ಲಿ ಕಾಯುತಿದ್ದೇನೆ .... ಕಾಯುತಿದ್ದೇನೆ
ಇದೆ ನೋಡಿ ಕಥೆ ಬರೆಯಲು ಹೋದವನ ಕಥೆ !
Comments
ಉ: ಕಥೆ ಬರೆಯಲು ಹೋದವನ ಕಥೆ !
In reply to ಉ: ಕಥೆ ಬರೆಯಲು ಹೋದವನ ಕಥೆ ! by raghusp
ಉ: ಕಥೆ ಬರೆಯಲು ಹೋದವನ ಕಥೆ !
ಉ: ಕಥೆ ಬರೆಯಲು ಹೋದವನ ಕಥೆ !