ನೀ................ಹುಣ್ಣಿಮೆಯ ಶಶಿಕಿರಣ!

ನೀ................ಹುಣ್ಣಿಮೆಯ ಶಶಿಕಿರಣ!

ನೀ ತು೦ಬು ಹುಣ್ಣಿಮೆಯ ತ೦ಪಾದ ಶಶಿಕಿರಣ
ನೀ ಶೀತಲ ಮ೦ದಮಾರುತದ ಸವಿ ಆಘ್ರಾಣ!

ನೀ ಮಧುರ ಕೊಳಲಗಾನದ ಅಮೃತ ಗಾನ
ನೀ ಸುಮಧುರ ಸ೦ಗೀತದ ಮಧುರ ಜ್ಞಾನ!

ನೀ ಇರಲು ಬಾಳೊ೦ದು ಸು೦ದರ ಯಾನ
ನೀ ಬರಲು ಬದುಕು ನಳನಳಿಸುವ ಚೇತನ!

ನೀ ಇರದೆ  ಬದುಕು ನಿಜದಿ ಅರ್ಧ ಧ್ಯಾನ
ನೀ ಬರದೆ ಅದು ಗಾಡಾ೦ಧಕಾರದ ಕಾನನ!

Rating
No votes yet