ಕೊಳಲಿಗೆ

ಕೊಳಲಿಗೆ

ಓ ಕೊಳಲೇ,
ನೀನಿರುವೆ
ನಸುನಗುವ ಮುಕುಂದನ
ಮೊಗದಾವರೆಯ ಬಳಿಯೇ;

ಅವನುಸಿರನೇ ಸವಿದು
ನಲಿವ ನಿನಗೆ
ನಾ ಕೈಯ ಮುಗಿವೆ;
ಬೇಡಿಕೊಳುವೆ.

ಆ ನಂದ ಕಂದನ
ರನ್ನದಾ ತುಟಿಗಳ ಬಳಿಸಾರಿ
ನೀ
ಹೇಗೋ ನನ್ನಳಲನ್ನು
ಅವನ ಕಿವಿಯಲ್ಲಿ
ಮೆಲ್ಲಗುಸಿರೇ!



ಸಂಸ್ಕೃತ ಮೂಲ: (ಶ್ಲೋಕ ೧೧ - ಲೀಲಾಶುಕನ ಕೃಷ್ಣಕರ್ಣಾಮೃತ)

ಅಯಿ ಮುರಲಿ ಮುಕುಂದ ಸ್ಮೇರ ವಕ್ತ್ರಾರವಿಂದ-
ಶ್ವಸನಮಧುರಸಜ್ಞೇ ತ್ವಂ ಪ್ರಣಮ್ಯಾದ್ಯ ಯಾಚೇ
ಅಧರಮಣಿಸಮೀಪಂ ಪ್ರಾಪ್ತವತ್ಯಾಂ ಭವತ್ಯಾಂ
ಕಥಯ ರಹಸಿ ಕರ್ಣೇ ಮದ್ದಶಾಂ ನಂದಸೂನೋಃ

-ಹಂಸಾನಂದಿ
Rating
No votes yet

Comments