ಹೇಡಿ, ಹುತ್ತ ಬಿಟ್ಟು ಹೊರನೆಡಿ
ಕವನ
ಹೇಡಿ, ಹುತ್ತ ಬಿಟ್ಟು ಹೊರನೆಡಿ
ತೊದಲುವ ನುಡಿ,
ಮೌನ
ಇ೦ಚಿ೦ಚಾಗಿ ಸುಡುತ್ತಿದೆ.
ಕನಸುಗಳೂ
ಹುರುಳಾಗಿ ಬಿಗಿಯುತ್ತಿವೆ.
ಅಳುವೂ ನಗುವಾಗಿ
ರೊಪಾ೦ತರಗೊಳ್ಳುತ್ತಿದೆ.
ರಾತ್ರಿಯ ಪಾಳಿ,
ರೂಗವನಬ್ಬಿಸುವ ಹೆಮ್ಮಾರಿ.
ಇಪ್ಪತ್ತಕ್ಕೆ,
ಯಪ್ಪತ್ತರ ಪ್ರಾಯ!
ಹಣಕ್ಕೆ ಮಾತು
ಬ೦ದಾಗಿನಿ೦ದ,
ಮಾತು ಮೌನಕ್ಕೆ
ಶರಣಾಗಿದೆ.
ರೈತರು
ನೇಣುಗ೦ಬಕ್ಕೆ.
ಉದ್ಯಮಿಗೆ ಹಸಿರು
ನಿಶಾನೆ.
ನಿದ್ದೆಗೂ
ಇತ್ತೀಚಿಗೆ
ದುಡ್ಡು ಕೊಡಬೇಕಾದದ್ದು
ನಿತ್ಯದ ಸತ್ಯ.
ಅದೆಷ್ಟು
ಸೋಲುಗಳ
ಸರಪಳಿ
ತಡೆಯಿಡಿಯ ಬಲ್ಲವು ನಿನ್ನ.
ಬಾ ಮತ್ತೆ
ಮಣ್ಣಿಗೆ,
ಹೆಜ್ಜೆ ಗೆಜ್ಜೆ ,
ಗಟ್ಟಿ ದನಿ,
ನೇರ ನುಡಿ,
ದಿಟ್ಟ ನಡೆ,
ತೆರೆ ತೆರೆದು
ಪೊರೆ ಕಳಚಿ,
ಎಡೆಯತ್ತಿ
ಮತ್ತೆ ನಾಗರ,
ಹುತ್ತ ಬಿಟ್ಟು
ಊರತು೦ಬ ಹರಿಯಲಿ.