ನಿನಗೆ ಬೇರೆ ಹೆಸರು ಬೇಕೇ...?
ಇಂದು ನಮ್ಮ ಜೀವನದ ಹತ್ತು ಹಲವು ಮಜಲುಗಳಲ್ಲಿ, ಏರುವ ಮೆಟ್ಟಿಲುಗಳಾಗಿ, ಧೈರ್ಯ, ಸಾಂತ್ವಾನದ ಮೂರ್ತಿಗಳಾಗಿ, ಅಮ್ಮ, ಅಕ್ಕ, ತಂಗಿ,ಅತ್ತಿಗೆ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮ, ಅಜ್ಜಿ, ಹೆಂಡತಿ, ಗೆಳತಿ ಹೀಗೆ ಹಲವು ಪಾತ್ರಗಳಾಗಿ ನಮ್ಮ ಜೀವನದ ಈ ನಾಟಕದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಹೆಣ್ಣೇ... ನಿನಗಿದೋ ವಂದನೆ.
ಈ ಮಹಿಳೆಯರ ದಿನಾಚರಣೆಯ ಸಂದರ್ಭದಲ್ಲಿ, ಈ ಕೆಳಗಿನ ಕವಿವಾಣಿಯ ಮೂಲಕ ನನ್ನ ನಮನಗಳನ್ನು ಅರ್ಪಿಸಬಯಸುತ್ತೇನೆ.
ಆಕಾಶದ ನೀಲಿಯಲ್ಲಿ,
ಚಂದ್ರ ತಾರೆ ತೊಟ್ಟಿಲಲ್ಲಿ,
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ.....
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಅಂದರೆ ಅಷ್ಟೇ ಸಾಕೆ...
ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳು ಸವರಿ
ಹಕ್ಕಿ ಗಿಲಕಿ ಬಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ...
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಅಂದರೆ ಅಷ್ಟೇ ಸಾಕೆ..
ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪನವರ ಈ ಕವಿ ವಾಣಿಯಂತೆ ಹೊತ್ತು ಹೊತ್ತಿಗೆ ಅನ್ನ ಉಣಿಸಿ, ಮನೆಯ ಎಲ್ಲರನ್ನೂ ಪ್ರೀತಿಯ ಸುಧೆಯಲ್ಲಿ ಹರಿಯುವಂತೆ ಮಾಡಿರುವ ಅಮ್ಮ, ಅಮ್ಮನನ್ನು ಊರಿನಲ್ಲಿ ಬಿಟ್ಟು, ಓದಿಗಾಗಿ, ಕೆಲಸಕ್ಕಾಗಿ ಈ ಬೆಂಗಳೂರಿಗೆ ಬಂದಾಗ, ದೊಡ್ಡಮ್ಮನಾಗಿ, ಚಿಕ್ಕಮ್ಮನಾಗಿ, ಅಕ್ಕನಾಗಿ ಅಕ್ಕರೆಯ ಸವಿ ಮೆಲ್ಲಿಸಿ, ತಂಗಿಯಾಗಿ ತಂಟೆ ಮಾಡುತ್ತಲೇ ಪ್ರೀತಿಸುವ ಈ ಪರಿ ಈ ಹೆಣ್ಣಿನಿಂದಲೇ ಕಲಿಯಬೇಕು. ಇಂಥಹ ಹೆಣ್ಣಿಗೆ ನನ್ನ ನುಡಿ ನಮನ....
Comments
ಉ: ನಿನಗೆ ಬೇರೆ ಹೆಸರು ಬೇಕೇ...?
ಉ: ನಿನಗೆ ಬೇರೆ ಹೆಸರು ಬೇಕೇ...?
In reply to ಉ: ನಿನಗೆ ಬೇರೆ ಹೆಸರು ಬೇಕೇ...? by gopinatha
ಉ: ನಿನಗೆ ಬೇರೆ ಹೆಸರು ಬೇಕೇ...?