ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು

ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು

ಪ್ರತೀ ವರ್ಷವೂ ನಡೆಯುವ ಆಸ್ಟ್ರಿಯಾದ ವಾರ್ಷಿಕ ಮೋಜಿನ ಕಾರ್ಯಕ್ರಮದಲ್ಲಿ (annual ball season) ಮೊರಾಕ್ಕೋ ದೇಶದ ಷೋ ಗರ್ಲ್ ಮತ್ತು ಇಟಲಿಯ ಪ್ರಧಾನಿ ಬೆರ್ಲಸ್ಕೊನಿಯವರ ಗರ್ಲ್ ಫ್ರೆಂಡ್ ಹದಿಹರೆಯದ  “ರೂಬಿ” ಯ ಉಪಸ್ಥಿತಿಯನ್ನು ಅಲ್ಲಿಗೆ ಬಂದ ಅತಿಥಿಗಳು ವಿರೋಧಿಸಿದರು. ಇದೊಂದು ಗೌರವಾನ್ವಿತರ ಸಮಾರಂಭ ಮತ್ತು ಮೋಜಿನ ಕಾರ್ಯಕ್ರಮವಾಗಿದ್ದು ಇಲ್ಲಿಗೆ ಕರೆವೆಣ್ಣು ಗಳು ಬಂದು ಘನತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ದೂರಿದರು. ಈಕೆಯನ್ನು ಕರೆತಂದಿದ್ದ ಶ್ರೀಮಂತನೊಬ್ಬನಿಗೆ ಮುಂದಿನ ವರ್ಷ ಈ ಸಮಾರಂಭಕ್ಕೆ ಟಿಕೆಟ್ ನೀಡೋದಿಲ್ಲ ಎಂದು ಆಯೋಜಕರು ಹೇಳಿದರು. ಹೀಗೆ, ಪ್ರತಿಷ್ಠಿತ ವ್ಯಕ್ತಿಗಳ, ಶ್ರೀಮಂತರ, ಪ್ರಭಾವೀ  ರಾಜಕಾರಣಿಗಳ ಮತ್ತ ಅವರ ಸಂಸಾರವಂದಿಗರ ಮೋಜಿನ ಮೇಳಕ್ಕೆ ಯಕಃಶ್ಚಿತ್ call girl ಬರುವುದು ಎಂದರೆ ಅಪರಾಧವೇ. ಮೋಜು ಮುಗಿದ ನಂತರ ಅಲ್ಲಿಗೆ ಬಂದ ಕೆಲವರು ಇದೇ call girl ಗಳು ಮಾಡೋ ಕೆಲಸವನ್ನೇ ಮಾಡಿದರೂ ಅದು ಪ್ರತಿಷ್ಠೆ, ಘನತೆ, ಶ್ರೀಮಂತಿಕೆಯ ಕಂಬಳಿಯಡಿ ನುಸುಳಿ ಹೋಗುತ್ತದೆ, we are having ball of a time, you see? ಅದಿರಲಿ, ಈ ಸಮಸ್ಯೆಗೆ ಧಾರ್ಮಿಕ ತಿರುವನ್ನು ನೀಡಿದರು ಕ್ರೈಸ್ತ ಪಾದ್ರಿಯೊಬ್ಬರು. ರೂಬಿಯ ಉಪಸ್ಥಿತಿಯನ್ನು ಸಮರ್ಥಿಸುತ್ತಾ ಪಾದ್ರಿಗಳು ಹೇಳಿದರು,..


“ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು ಎಲ್ಲರಿಗಿಂತ ಮೊದಲು ದೇವನ ಸಾಮ್ರಾಜ್ಯವನ್ನು ಸೇರುವರು”. ಇದಕ್ಕೆ ಉತ್ತರ ಗಡಚ್ಚಿಕ್ಕುವ ಡ್ರಂ ಗಳ ಸದ್ದಿನಲ್ಲಿ, ಕುಣಿತದ ಗದ್ದಲದಲ್ಲಿ, ರೂಬಿಯ ಮೈಮಾಟದ ಪ್ರದರ್ಶನದಲ್ಲಿ ಕೇಳಿಸಲೇ ಇಲ್ಲ.     

Rating
No votes yet