ಶಿಥಿಲತೆ

ಶಿಥಿಲತೆ

ಶಿಥಿಲತೆ

 

 

 

 

 

 

 

 

 

 

 

 

 

ನೆನಪುಗಳ ಕೊಂಡಿಯೇ ನಾನು
ಶಿಥಿಲ ತಳಪಾಯದ ಮೇಲಿನ
ಅಪಾರ ಬೆಳವಣಿಗೆಯಲ್ಲಿ
ನಿರಂಕುಶ ಮಾನವತ್ವದ
ನಿರ್ವಾತ
ನಗಣ್ಯ ಸಂಕುಲದ
ವ್ಯರ್ಥ ಪ್ರಯತ್ನದಲ್ಲಿ
ನಿಂತಲ್ಲಿಯೇ ಹಳತಾಗುವ ಕಟ್ಟೋಣಗಳು
ನಿರ್ಜೀವ ಸಂಬಂಧಗಳ ಶಿಥಿಲತೆ


ಭೂರ್ಜ್ವ ಪತ್ರದಿಂದ
ಮಿಂಚು ಪತ್ರದೊರೆಗಿನ
ಜೀವನದ ಅಂತರಕ್ಕೂ
ಕ್ಷಣಿಕ ಬೆಸುಗೆಯ
ಅನಂತತೆಯ ಏಳು ಬೀಳುಗಳ
ಕ್ಷಣಗಳು, ಬೊಗಸೆ
ತುಂಬದ ಖುಷಿಯ
ಪಳೆಯುಳಿಕೆಗಳಿಂದ
ತಡವರಿಸುವ ನಿನ್ನೆಯೊಂದಿಗೆ ಬೆಸೆಯೊ
ನಾಳಿನ ಭದ್ರ
ಬುನಾದಿಯ ಇಂದಿಗೆ


ಇತಿಹಾಸದ ಅಸಹಾಯಕ ದಾರುಣ
ಮಗ್ಗುಲುಗಳಿಂದ ಭವಿಷ್ಯದ
ಏಕಾಕೀ ಉನ್ಮಾದದವರೆಗೆ
ಇನ್ನೂ ಬದುಕುವಾಸೆ
ಕುಟುಕು ಜೀವದ
ಅಂತಿಮ ಕ್ಷಣಗಳಲ್ಲೂ
ಜೀವೋನ್ಮಾದದ
ಹೊಸ ನಾಳಿನ
ನಿರೀಕ್ಷೆ

Rating
No votes yet

Comments