ಕಾವ್ಯದಲ್ಲಿ ಪದ ಚಮತ್ಕಾರ

ಕಾವ್ಯದಲ್ಲಿ ಪದ ಚಮತ್ಕಾರ

 

ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ ಹರಿಹರರಿಬ್ಬರ ವರ್ಣನೆಯೂ ಇದೆ. ಪ್ರತಿ ಪದದ ಮೊದಲ ಅಕ್ಷರ ಸೇರಿಸಿ ಓದಿದರೆ ಶಿವನ ಸ್ತುತಿಯಾದರೆ, ಮೊದಲ ಅಕ್ಷರವನ್ನು ಬಿಟ್ಟು ಓದಿದರೆ ವಿಷ್ಣುವಿನ ವರ್ಣನೆಯಾಗುತ್ತದೆ. ಇಂಥಹ ಪದ್ಯ ರಚನೆ ಕವಿಯ ಪಾಂಡಿತ್ಯವನ್ನು ಎತ್ತಿ ತೋರುತ್ತದೆ.  ಇದರ

ಸೊಬಗನ್ನು ನೀವೂ ಸವಿಲೆಂಬುದೇ ನನ್ನ ಆಶಯ.  ಇದೇ ರೀತಿಯ ಬೆರಗಿನ ಕಾವ್ಯಗಳು ನಿಮಗೆ ತಿಳಿದಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ.

 

 
"ಪಾಯಾತ್, ಕುಮಾರಜನಕ ಶಶಿಖಂಡಮೌಳಿಃ 
 ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ
 ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ
 ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ"
 
ಈ ಪದ್ಯದ ಅರ್ಥ ಹೀಗಿದೆ:
 
ಪಾಯಾತ್ - ಕಾಪಾಡು
ಕುಮಾರಜನಕ - ಶಿವ,  ಮಾರಜನಕ - ವಿಷ್ಣು
ಶಶಿಖಂಡಮೌಳಿಃ - ಚಂದ್ರನನ್ನು ಧರಿಸಿದವನು 
ಶಿಖಂಡಮೌಳಿಃ - ನವಿಲುಗರಿ ಧರಿಸಿದವನು
ಶಂಖಪ್ರಭಶ್ಚ - ಬಿಳಿ, ಹಿಮಾಲಯವಾಸಿ,ಕೈಲಾಸವಾಸಿ
ಖಪ್ರಭಶ್ಚ - ನೀಲಿ ಬಣ್ಣದವನು (ಖ-ಆಕಾಶ)
ನಿಧನಶ್ಚ - ಲಯಕಾರಕ, ಧನಶ್ಚ - ಲಕ್ಷ್ಮೀಪತಿ
ಗವೀಶಯಾನಃ - ಬಸವವಾಹನ,  ವೀಶಯಾನಃ - ಪಕ್ಷಿವಾಹನ
ಗಂಗಾಂಚ - ಗಂಗೆಯ ಒಡೆಯ, ಗಾಂಚ -ಗೋವುಗಳನ್ನು ಕಾದವನು
ಪನ್ನಗಧರಶ್ಚ - ಹಾವನ್ನು ಧರಿಸಿದವನು, ನಗಧರಶ್ಚ - ಗಿರಿಧರ
ಉಮಾವಿಲಾಸಃ - ಶಿವ, ಮಾವಿಲಾಸಃ - ವಿಷ್ಣು (ಮಾ-ರಮಾ)
ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ - ಪ್ರಥಮಾಕ್ಷರ ಸಹಿತವೂ ರಹಿತವೂ ಆದ ದೇವನೇ ಕಾಪಾಡು. 
 
 (ಚಿತ್ರಕೃಪೆ - ಅಂತರ್ಜಾಲ)
Rating
No votes yet

Comments