ಹೆಜ್ಜೆ ಮೂಡದ ಹಾದಿಯಲ್ಲಿ, ಮೌನದ ಹೆಜ್ಜೆ

ಹೆಜ್ಜೆ ಮೂಡದ ಹಾದಿಯಲ್ಲಿ, ಮೌನದ ಹೆಜ್ಜೆ

ಕವನ

 ಹೆಜ್ಜೆ ಮೂಡದ ಹಾದಿಯಲ್ಲಿ, ಮೌನದ ಹೆಜ್ಜೆ

 

ಮು೦ದಿನ ಪೀಳ್ಗೆಯ

ರೈತರು ನೀವು

ಬನ್ನಿರಿ ಬನ್ನಿರಿ

ಸವಿಯುವ, ಕೈ

ಕೆಸರಿನ ಮೈ ಮನಸಿನ

ಬೆವರಿನ ವಾಸನೆ

ಮಣ್ಣಿನ ಮಾರ್ದನಿ

ಎನ್ನುತ ಎನ್ನುತ

ಕೆರೆತ೦ದನು ಯುವಕರ

ಮಣ್ಣಿನ ಶಾಲೆಗೆ

ಅನ್ನದ ಜ್ಞಾನಕೆ

 

ಎಲ್ಲಿತೇನೊ ಬ೦ದಿತು

ಸುದ್ದಿ, ಭೀಕರ

ಘೋರ.

 

ಅಪ್ಪನ ಜೊತೆಗೆ

ಮಣ್ಣಿನ ಶಾಲೆಗೆ

ಸೇರುವೆನೆ೦ದು

ಅಮ್ಮನಿಗೇಳಿ

ಬಿಟ್ಟನು ಮನೆಯನು

ತನಯನು

ಕಾರನ್ನೇರಿ

 

ವೇಗದ ಜೀವನ

ಕಾರಿಗೆ ಕಾರು

ಡಿಕ್ಕಿಯ ಹೊಡೆದು

ಸೆಳೆದನು ಜವನು

ಆತನ ಮಗನ

 

ಕುಸಿಯಿತು ಮನ

ಸದ್ದಿಲ್ಲದ ಮೌನಕೆ

ರಕ್ತವು ತಣ್ಣಗೆ

ಹೆಪ್ಪನುಗಟ್ಟಿ

 

ಮೆಲುದನಿಯಲಿ

ನುಡಿದನು ಆತ

ಸೇರುವೆ ಮನೆಯ

ಮಗ ಮನೆ ಸೇರುವ ಮುನ್ನ

ನಾ, ಹಿ೦ದಿರುಗುವವರೆಗೆ

ನಿಲ್ಲದೆ ಇರಲಿ

ಮಣ್ಣಿನ ಮಕ್ಕಳ

ಅನ್ನದ ಶಾಲೆ

ಎನ್ನುತ ತನ್ನ

ಸ್ನೇಹೆತಗೇಳಿ

ಬೆಟ್ಟವೇ ತಾನಾಗಿ,

ಭಾರದ ಹೆಜ್ಜೆಯ,

ಮೌನದ ಹೆಜ್ಜೆಯ ನಿಟ್ಟನು

ಮನೆಯನ್ನರಸಿ

 

ಕಣ್ಣಾಲಿಗಳಲ್ಲಿ

ಹಲ್ಗೆನ್ನೆಯ

ಮೃದು ಬೆರಳಿನ

ಹಸಿ ಮೈಯಿನ

ಮುದ್ದಿನ ಮಗನ

ಹುಟ್ಟಿನ ಚಿತ್ರ

ಮೂಡಿತು

ಬಿತ್ತಿತು

ಮುರಿಯದ

ಮೌನದ ಮೌನ...

 

Comments