ಹುಟ್ಟು ಹಬ್ಬದ ದಿನ ದೀಪ ನಂದಿಸಬೇಕೆ?

ಹುಟ್ಟು ಹಬ್ಬದ ದಿನ ದೀಪ ನಂದಿಸಬೇಕೆ?

Comments

ಬರಹ

ಆತ್ಮೀಯರೇ, ಇದೊಂದು ವಿಷಯ ಬಹಳ ದಿನಗಳಿಂದ ಕೊರೆಯುತ್ತಿದೆ. ಇತ್ತೀಚಿಗೆ ನನ್ನ ಗೆಳೆಯನ ಮಗಳ ಹುಟ್ಟುಹಬ್ಬಕ್ಕೆಂದು ಆತನ ಮನೆಗೆ ಹೋಗಿದ್ದಾಗ ಅಲ್ಲಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಕೇಕ್ ಮೇಲೆ ೩ನೆ ನಂಬರಿನ ಮೋಂಬತ್ತಿಯನ್ನು ಹಚ್ಚಿ ಅದನ್ನು ಆರಿಸಿ ನಂತರ ಕೇಕ್ ಕತ್ತರಿಸಿದರು. ಇದು ಎಲ್ಲ ಕಡೆ ನಡೆಯುವ ಪದ್ಧತಿ ಅದರಲ್ಲೇನು ಹೊಸದು ಎನ್ನುತ್ತಿರ? ಅಲ್ಲ ಸ್ವಾಮಿ ನಮ್ಮ ಪದ್ಧತಿಯಲ್ಲಿ ಹುಟ್ಟು ಹಬ್ಬದ ದಿನ ದೀಪ ಬೆಳಗಿಸಿ ಸದಾ ಕಾಲ ಆ ದೀಪದಂತೆ ನಮ್ಮ ಜೀವನವು ಬೆಳಗಲಿ ಎಂದು ಬೇಡಿಕೊಳ್ಳುವುದರಲ್ಲಿ ಅರ್ಥವಿದೆ. ಆದರೆ ಈ ದೀಪವನ್ನು ಆರಿಸುವುದರ ಸಂಕೇತ ಏನು? ಇದೆ ವಿಷಯವನ್ನು ನನ್ನ ಗೆಳೆಯನಲ್ಲಿ ಕೇಳಿದ್ದೆ ಏತಕ್ಕೆ ದೀಪ ಹಚ್ಚಿ ಆರಿಸಿದೆ ಎಂದಿದ್ದಕ್ಕೆ ಆತ ನನಗೆ ಗೊತ್ತಿಲ್ಲ ಹೀಗೆ ತಾನೇ ಮಾಡುವುದು ಅದಕ್ಕೆ ನಾನು ಹಾಗೆ ಮಾಡಿದೆ ಎಂದ. ನಂತರ ಆತನಿಗೆ ವಿವರಿಸಿ ಹೇಳಿದ್ದಕ್ಕೆ ಇನ್ನು ಮುಂದೆ ದೀಪ ಆರಿಸುವುದಿಲ್ಲ ಎಂದ. ಈ ದೀಪ ಆರಿಸುವ ಪದ್ಧತಿ ಯಾವ ಸಂಸ್ಕೃತಿ? ಯಾರಿಂದ ಅನುಕರಿಸುತ್ತಿರುವುದು?

 

ವಿ.ಸೂ: ಇದೊಂದು ಆರೋಗ್ಯದಾಯಕ ಚರ್ಚೆಯಾಗಲೆಂದು ಭಾವಿಸುತ್ತೇನೆ. ವಿಷಯಾಂತರ ಚರ್ಚೆಗಳು,ವೈಯಕ್ತಿಕ ನಿಂದನೆಗಳು ಬೇಡ. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet