ಸಂಗಾತಿಯೇ!

ಸಂಗಾತಿಯೇ!

ಸಂಗಾತಿಯೇ!

 

ಸಂಗಾತಿಯೇ ನೀನಿಲ್ದೆ ಹೇಗೆ ಬದುಕಲಿ ನಾ
ಹೂವಲ್ಲಿ ಮೊಗ್ಗಲ್ಲಿ ಕನಸಿನ ನಾಡಲ್ಲಿ
ನೀನಿಲ್ದೇ ಎಲ್ಲೂ ಏನಿಲ್ಲಾ...

ಹೇಗೋ ಏನೋ ನೆಲೆಯೂರಿಹರು ಯಾರೋ ನನ್ನೀ ತಪ್ತ ಮನದಿ
ನನ್ನದೆಲ್ಲಾ ಕಳೆದುಕೊಂಡೆ ಹುಚ್ಚುಮನದ ಹುಚ್ಚುತನದಿ
ಈ ಮನದ ಒಳಕತೆಯಾ ನೀ ಬಲ್ಲೆ ನಾ ಬಲ್ಲೆ ಇನ್ನಾರೂ ಅರಿಯರಿದನಾ
ನೀನಿಲ್ದೆ ಹೇಗೆ ಬದುಕಲಿ ನಾ

ಪ್ರತಿ ಮಿಡಿತದಲೂ ನಿನ್ನದೇ ತುಡಿತ ಉಸಿರಲ್ಲಿ ಇದೆ ನಿನ್ನದೇ ಕಂಪು
ಭೂಮಿಯಿಂದ ಆಗಸದೊರೆಗೂ ಕಾಣುವುದೆನಗೆ ನಿನ್ನದೇ ರೂಪು
ಈ ಪ್ರೀತಿ ಅಳೀದಂತೆ, ನೀ ಎಂದೂ ಮುನೀದಂತೆ, ಜೊತೆಯಲ್ಲೇ ನಾವಿರೋಣಾ
ನೀನಿಲ್ದೆ ಹೇಗೆ ಬದುಕಲಿ ನಾ

ಜೋಗಿನಿಯಂತಿದೆ ನೀನಿರದಿರುಳು, ಅಲೆಮಾರಿಯಂತಿದೆ ಪ್ರತಿಯೊಂದು ಹಗಲು,
ಸುಡತಲಿಹುದು ನನ್ನೀ ಜೀವನ, ಕರಗುತಾ ಸಾಗಿವೆ ನನ್ನ ಕನಸುಗಳು,
ನೀನಿಲ್ಲದೇ ನನ್ನ, ನಾನಿಲ್ಲದೇ ನಿನ್ನ, ಏನೂ ಅಲ್ಲ ಈ ಜೀವನಾ
ನೀನಿಲ್ದೆ ಹೇಗೆ ಬದುಕಲಿ ನಾ

***********************

 

ಆತ್ರೇಯರ ಈ ಕೆಳಗಿನ ಭಾವನುವಾದದಿಂದ ಸ್ಪೂರ್ತಿಗೊಂಡು ಬಂದ ಭಾವಾನುವಾದ:

 
 
ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ

 

 

 

Rating
No votes yet

Comments