ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
ನಿಮ್ಮ ವಾಯು ವಿಹಾರದಲ್ಲಿ ಮೋಜಿನ ಪ್ರಸಂಗ ನಡೆದಿತ್ತಾ.
ನಾವು ಮೂವರು ಗೆಳತಿಯರು ಬೆಳಗ್ಗಿನ ವಾಯುವಿಹಾರ ಹೋಗಲೇಬೇಕೆಂದು ಪಣ ತೊಟ್ಟಿದ್ದೆವು.
ಅಬ್ಬಾ ಹೊರಡಲು ಅದೆಷ್ಟು ಅಡೆತಡೆಗಳು.
ಮೊದಮೊದಲು ಬೆಳಗಿನ ಸಿಹಿ ನಿದ್ದೆಯಿಂದ ಏಳುವ ಸೋಮಾರಿತನಕ್ಕೆ ಏನೇನೋ ನೆಪ, ಕಾರಣ ಹುಡುಕಿ ತಪ್ಪಿಸಿಕೊಳ್ಳುವ ಮನಸು.
ಆದರೆ ಅಭ್ಯಾಸವಾದಂತೆ ಹೋಗಲಾಗದಿದ್ದ ದಿನ ಮನಸ್ಸಿಗೇನೊ ಮುನಿಸು.
ಮುಖ್ಯ ಕಾರಣ ನಮ್ಮ ಮೂವರಲ್ಲಿದ್ದ ಸಮಾನ ಮನಸ್ಕತೆ. ಮೂವರು ಸಂಗೀತ ಪ್ರಿಯರು.
ಅವರಿಬ್ಬರು ಸಂಗೀತದಲ್ಲಿ ಬಲ್ಲಿದರು. ನಾನು ಬಡವಳು. ಆದರೇನು ಆಸಕ್ತಿ ಉಳ್ಳವಳು.
ಹಾಗಾಗಿ ಮಾತೆಲ್ಲಾ ಬರಿ ಹಾಡು, ರಾಗಗಳ ಕುರಿತವೇ ಆಗಿರುತಿತ್ತು.
ಒಂದು ದಿನ ಬೀಗದ ಕೈ ಸಿಗದ ಕಾರಣ ಸ್ನೇಹಿತೆ ಗೇಟು ಹಾರಬೇಕಾಗಿ ಬಂತು. ಬಿದ್ದದ್ದೂ ಆಯಿತು,
ಮೊದಲು ಪೆಟ್ಟೇನಾದರು ಆಗಿದೆಯೇನೊ ಎಂಬ ಆತಂಕವಾಯಿತು.
ಸದ್ಯ ಕತ್ತಲೆ ಯಾರು ನೋದಲಿಲ್ಲವೆಂಬ ಅವರ ಮಾತು ಕೇಳಿ, ಬಿದ್ದಾಗ ನಗಬಾರದೆಂದು ಒತ್ತಿ ಹಿಡಿದಿಟ್ಟ ನಗು ಒಮ್ಮೆಲೆ ಹೊರಹೊಮ್ಮಿತು.
ಕಣ್ಣಲ್ಲಿ ನೀರು ಬರುವಷ್ಟು ನಗು ನಮ್ಮದಾಗಿತ್ತು.
ಆಗ ಇನ್ನೊಬ್ಬ ಸ್ನೇಹಿತೆ ನೀವಿಬ್ಬರು ಈ ಪ್ರಸಂಗದ ಬಗ್ಗೆಯೇ ಕವನ ಬರೆಯಬಾರದೇಕೆ ಎಂದರು.
ಬಿದ್ದವರು ಕವನ ಚೆನ್ನಾಗಿ ಬರೆದಿದ್ದರು. ನಾನು ಹಾಗೆ ಸುಮ್ಮನೆ ಬರೆದ್ದಿದ್ದೇ ಕೆಳಗಿನ ಕವನ. ಪದ್ಯ ಸ್ವಲ್ಪ ಗದ್ಯವಾಗಿದೆ ಅಷ್ಟೆ.
ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
ನೋಡಿಯೇ ಇರುತ್ತೀರಿ ಮಕ್ಕಳು
ತುಂಟತನದಿಂದ ಗೇಟು ಹಾರುವುದನ್ನು
ಕೇಳಿಯೇ ಇರುತ್ತೀರಿ ಬೀಗ ಹಾಕದಿದ್ದರೂ
ಕಳ್ಳ ಗೇಟು ಹಾರಿದ್ದನ್ನು
ಪ್ರಸಂಗವೊಂದಿದೆ ಕೇಳಿರಿ ಮನೆಯೊಡತಿ
ಗೇಟು ಹಾರಿದ್ದೇಕೆಂದು.
ಸಿದ್ಧವಾದಳು ಮನೆಯೊಡತಿ ಪೂರೈಸಲು
ವಾಯುವಿಹಾರವನ್ನು
ಬೀಗ ಹಾಕಿ ಬಾಗಿಲಿಗೆ, ಒಳಗೆಸೆದಳು
ಬೀಗದ ಕೈ ಗೊಂಚಲನ್ನು
ಮರತೆ ಬಿಟ್ಟಿದ್ದಳು
ಗೇಟಿಗೆ ಬೀಗ ಹಾಕಿದ್ದನ್ನು.
ತೊಂದರೆ ಎಂದು ರಾತ್ರಿಯೇ ಆರಿಸಿದ್ದಳು
ಕರೆಗಂಟೆಯ ಗುಂಡಿಯನ್ನು
ಬಾಗಿಲ ತಟ್ಟಿ ಕೂಗಿದರೂ ಬರಲಿಲ್ಲ ಯಾರೂ
ಕೊಡಲು ಬೀಗದ ಕೈಯನ್ನು
ಕಾಯುತ್ತಿದ್ದರು ಗೇಟಿನಾಚೆ ಗೆಳತಿಯರು
ಅವಳ ಬರವನ್ನು.
ಸಂಕೋಚಗೊಂಡರೂ ಕೊನೆಗೆ
ಹಾರಲೇಬೇಕಾಯಿತು ಗೇಟನ್ನು
ಆದರೂ ಹೇಳಿದಳು ಕತ್ತಲೆ
ನಾ ಬಿದ್ದದ್ದು ಯಾರು ನೋಡಲಿಲ್ಲವೆಂದು
ಕೇಳಿ ನಕ್ಕರು ಗೆಳತಿಯರು
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲ್ಲಿಲ್ಲವೆಂಬ
ಅವಳ ಪರಿಯನ್ನು.
Comments
ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
In reply to ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ) by gopinatha
ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
In reply to ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ) by saraswathichandrasmo
ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
In reply to ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ) by Saranga
ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)
In reply to ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ) by vinyasa
ಉ: ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)