ಮತ್ತೊಂದು ದಿವ್ಯ ಸಮ್-ದರ್ಶನ.... ೨
ಮತ್ತೊಂದು ದಿವ್ಯ ಸಮ್-ದರ್ಶನ.... ೨
ಕೇಳ್ವೆ: ದೇವಾ ನನ್ನ ಹಿಂದಿನದ್ದೆಲ್ಲ ನನಗೆ ಗೊತ್ತಿದೆ, ಮುಂದಿನದ್ದೇನಾದರೂ ಕೇಳಲೇ?
ಉತ್ತರ : ಕೇಳು, ನಿನ್ನ ಭೂತವೆಂದಾದರೂ ಭವಿಷ್ಯತ್ತಿಗೆ ಅಡ್ಡಿಯಾಗಬಾರದೆಂದಿದ್ದರೆ ನಿನ್ನ ವರ್ತಮಾನವನ್ನೇ ಸರಿಪಡಿಸಿಕೋ, ಭವಿಷ್ಯವೆಂದೂ ನಿನಗೆ ತೊಂದರೆ ಕೊಡೋಲ್ಲ.
ಕೇಳ್ವೆ: ಅರ್ಥೈಸಲಾಗಲಿಲ್ಲ. ಉತ್ತರ ಇನ್ನೂ ಸರಳವಾಗಿಸು.
ಉತ್ತರ: ನೀನಿರುವುದು ನಿನ್ನ ವರ್ತಮಾನದಲ್ಲಿ, ನನಗೆ ನಿನ್ನ ಮುಂದಿನ ನೂರೂ ತಲೆಮಾರೂ ವರ್ತಮಾನವೇ, ನಿನ್ನ ಭವಿಷ್ಯವೆಂದರೆ ಈಗಿರುವ ನೀನೇ, ನಿಜವಾದ ನೀನು ನನ್ನ ಹಾಗೇ ಅವಿನಾಶಿ, ಗತಿ ಮತ್ತು ಸ್ಥಿತಿಗಳಂತರ ನಿನಗೆ ಕಾಣುವುದು ಕ್ಷಣಿಕವಷ್ಟೇ,
ಕೇಳ್ವೆ: ಇಲ್ಲ ,ಇನ್ನೂ ಸರಳವಾಗಿಸು
ಉತ್ತರ: ನಿನಗೆ ಅರ್ಥೈಸಿಕೊಳ್ಳಬೇಕು ಅಂತ ಇದ್ದರೆ ತಾನೇ, ಇರಲಿಬಿಡು ಇನ್ನೊಮ್ಮೆ ಶಾಸ್ತ್ರಿಗಳ ಕ್ಲಾಸಿಗೆ ಹೋಗು ಅರ್ಥವಾಗುತ್ತದೆ. ಬೇರೇನಾದರೂ ಇದ್ದಲ್ಲಿ ಕೂಡಲೇ ಕೇಳು , ನೈವೇಧ್ಯವೋ ಬಲಿಯೋ ಬಿಸಾಡುತ್ತಿದ್ದಾರೆ, ಕಾಲ ಬಳಿ, ಅಂದರೆ ನನ್ನ ಸಾಮಾನ್ಯ ಪಾಳಿ ಶುರುವಾಯ್ತು ಅಂತ ಅರ್ಥ.
ಕೇಳ್ವೆ: ದೇವಾ, ನವ ವಿವಾಹಿತರು ಕೆಲವು ದೇವಾಲಯಗಳಿಗೆ ಹೋಗಬಾರದೆಂದು ಹೇಳ್ತಾರಂತಲ್ಲ ಯಾಕೆ, ನಮ್ಮ ಸಂಪದಿಗರೇ ಆದ ಜಯಂತ್ ಹತ್ತಿರ ಎಲ್ಲಾ ಹಾಗೇ ಹೇಳಿದ್ದರಂತೆ.
ಉತ್ತರ: ಅಸಾಮಾನ್ಯರು ನೀವು, ನಿಮ್ಮ ಹಾಗೇ ನಮ್ಮನ್ನೂ ಇರಗೊಡಲು ಬಯಸುತ್ತೀರಾ, ನಮ್ಮ ಕಾಲಕ್ಕೂ ನಿಮ್ಮ ಕಾಲಕ್ಕೂ ಅಜಗಜಾಂತರವಿದೆ . ಯಾವುದು ಸತ್ಯ ಮಿಥ್ಯ ಅಂತ ಹೊರಗೆ ಹುಡುಕುತ್ತೀರಲ್ಲ, ಒಳಗೆ ಹುಡುಕಿದರಲ್ಲವೇ ಸತ್ಯ ದರ್ಶನವಾಗುವುದು. ಎಲ್ಲ ಕೇಳ್ವೆಗೂ ನಿನಗೆ ಅನುಗುಣವಾದ ಉತ್ತರವಿರಲೇಬೇಕು ಎಂಬ ಆಸೆ ಏಕೆ? ಅಥವಾ ಇನ್ನೊಬ್ಬರಿಂದಲೇ ಉತ್ತರ ಏಕೆ ಬೇಕು?
ಕೇಳ್ವೆ: ಅಲ್ಲ ಸಂಪದ ಎಂಬುದು ಉತ್ತಮ ಬ್ಲಾಗ್, ಅದರಲ್ಲಿ ಸಂಶಯವೇ ಇಲ್ಲ, ಇತ್ತೀಚೆಗೆ ಕೆಲವರಿಗೆ ಸಂಶಯವಾಗತೊಡಗಿದೆಯಲ್ಲ, ಪಾರ್ಥರೂ, ನಾವಡರೂ ಎಲ್ಲಾ ಕವಿತೆ ಬರೆಯ ತೊಡಗಿದ್ದಾರೆ, ಹೆಗ್ಡೆಯವರ, ಮಂಜೂರವರ ಬರಹಗಳು ಇತ್ತೀಚೆಗೆ ನಿಯತಕಾಲಿಕಗಳಲ್ಲೂ ಪ್ರಕಟವಾಗತೊಡಗಿವೆ.ಮೊದಲ ಕಾಲೆಳೆಯುವಯುಗ ಮುಗಿದು ಸಾಹಿತ್ಯ ಕಮ್ಮಟ ಶುರುವಾಯ್ತಾ ಹೇಗೆ ಅಂತ.
ಉತ್ತರ: ಕೇಳ್ವೆ ಬಾಲಿಶವಾಗಿದೆ, ಕವನ ಅಥವಾ ಕವಿತ್ವ ಹುಟ್ಟುವುದು ಮನದ ಚಿಂತನೆಯ ಮೂಲಕವಷ್ಟೇ? ಚಿಂತನೆಗಳು ಸಾರ್ವಕಾಲೀಕ, ಇದರ ಕೃಷಿಯೇ ಉತ್ತಮ ಬೆಳೆಯತ್ತ ಸಾಗುತ್ತದೆ. ಅದರ ಫಲಿತಾಂಶವೇ ಇದೆಲ್ಲಾ.
ಕೇಳ್ವೆ: ಹಾಗಿದ್ದಲ್ಲಿ ಇಲ್ಲಿಗೆ ಬಂದವಲ್ಲನೇಕರು ಕಾಣೆಯಾಗತೊಡಗಿದ್ದಾರಲ್ಲ ಇದಕ್ಕೆ ಕಾರಣವೇನು? ಸಂಪದದ ಭವಿಷ್ಯ..?
ಉತ್ತರ: ಪುನಃ ಬಾಲಿಶವಾದ ಕೇಳ್ವೆ . ನೋಡು, ನಿನ್ನ ಸಂಪದಕ್ಕೆ ತನ್ನ ಸ್ವಾರ್ಥಕ್ಕಾಗಿ ಬಂದವರು ಹಲವರು, ಕಲಿಯಲು ಬಂದವರು ಕೆಲವರು, ಕಲಿಸಲೂ ಬಂದವರನೇಕರು, ಇಲ್ಲಿ ಸಂಪದ ಮಾತ್ರ ಮುಖ್ಯ, ಬರುವವರು ಹೋಗುವವರಲ್ಲ, ಸುತ್ತಲಿನ ನಿನ್ನ ಪ್ರಪಂಚದಂತೆ. ಭವಿಷ್ಯಕ್ಕೆ ಮೊದಲಿನ ಕೇಳ್ವೆಯ ಉತ್ತರ ಇನ್ನೊಮ್ಮೆ ಓದಿಕೋ.
ಕೇಳ್ವೆ:ಜಪಾನ್ ನಲ್ಲಿ ಅಷ್ಟೊಂದು ಅನಾಹುತ ನಡೆಯಿತಲ್ಲ, ಹಾಗೆಲ್ಲಾ ಆದರೆ ನಿಮಗೆ ಬೇಸರವಿಲ್ಲವಾ? ನೀವು ತಡೆಯಲಿಲ್ಲ ಯಾಕೆ?
ಉತ್ತರ: ಯಾರು ಮಾಡಿದ ಅನಾಹುತವಿದು? ಏಕಾಯ್ತು? ನಾನು ಯಾವುದಕ್ಕೆ ಬೇಸರಪಡಲಿ? ಗಟ್ಟಿಯಿದೆ ಅಂತ ಕಲ್ಲಿಗೆ ತಲೆ ಹೊಡೆದುಕೊಂಡದ್ದಕ್ಕಾ? ಅಥವಾ ಒಂದೇ ತಾಯಿಮಕ್ಕಳೇ ಹೊಡೆದುಕೊಂಡು ಸತ್ತದಕ್ಕಾ? ಇದು ಪ್ರಕೃತಿ ನಿಯಮವಷ್ಟೇ!, ಈಗ ನಿನ್ನ ಯಾವುದಾದರೂ ಅಂಗಕ್ಕೇನಾದರೂ "ಶೈತ್ಯ ಕೊಳೆತ" ಶುರುವಾದರೆ ಏನು ಮಾಡುತ್ತೀಯಾ?
ಕೇಳ್ವೆ: ದೇಹಕ್ಕೆಲ್ಲಾ ಹರಡುವ ಮೊದಲು ಆ ಅಂಗವನ್ನೇ ಕತ್ತರಿಸಿಕೊಳ್ಳುತ್ತೇನೆ.
ಉತ್ತರ: ಈಗ ನಾನು ಮಾಡಿದ್ದೂ ಅದೇ.
ಕೇಳ್ವೆ: ಆದರೆ ಜಪಾನೇ ಏಕೆ?
ಉತ್ತರ:( ನಗು) ಬೇರೆ ಎಲ್ಲಿಯಾದರೂ ಅಗಿದ್ದರೆ ನೀವ್ಯಾರಾದರೂ ಉಳಿತಿದ್ರಾ?
ಕೇಳ್ವೆ: ಮತ್ತೊಂದು ಪ್ರಶ್ನೆ...... ಮತ್ತೆ...
ಉತ್ತರ:ನಾನೇ ಹೇಳುತ್ತೇನೆ ಕೇಳು, ನಿನ್ನ ಮನೆಯಲ್ಲಿ ನೀನು ಹೇಗೆ ತಂದೆ, ಮಗ, ಅಣ್ಣ , ತಂದೆ ,ಮಾವ, ಚಿಕ್ಕಪ್ಪ ಹೇಗೋ ಹಾಗೇ ನನ್ನದೇ ಬೇರೆ ಬೇರೆ ಹೆಸರು ವಿಶ್ವದಲ್ಲೆಲ್ಲಾ ಪೂಜಿಸಲ್ಪಡುತ್ತಿದೆ, ಎಲ್ಲವೂ ನನ್ನದೇ.
ಕೇಳ್ವೆ: ಮ...ಮತ್ತೆ ಇದೆಲ್ಲದಕ್ಕೆ ಕೊನೆ ಎಂದು.?
ಉತ್ತರ:ಪ್ರಳಯ ಅಂದರೆ ಅಂತ್ಯ ಕಣಪ್ಪಾ........ ಎಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭ ಮಾಡಿದಾಗಲೇ ಇದರ ಅಂತ್ಯ.
ಬೆಳಕಿನ ಭ್ರಮೆ ಕರಗಿತ್ತೇ.. ..ನನಗೆ ಎಚ್ಚರವಾಯ್ತಾ, ಅಥವಾ... ಪಕ್ಕದಲ್ಲಿಯೇ ಇದ್ದ ಶ್ರೀಮತಿ ಕುಟ್ಟಿದಳಾ ಅರ್ಥವಾಗಲಿಲ್ಲ. ಒಮ್ಮೆಲೇ ಪಕ್ಕವಾದ್ಯ, ಗುಡಿಗಂಟೆಗಳ ನಿನಾದ ನಿಂತು ಬಿಟ್ಟಿದ್ದವು. "ಏನ್ರೀ ದೇವಸ್ಥಾನಕ್ಕೆ ಬಂದೂ ತೂಕಡಿಸ್ತಾ ಇದ್ದೀರಲ್ಲಾ, ಪಕ್ಕದವರು ಹಿಡಿದುಕೊಳ್ಳದೇ ಇದ್ದಿದ್ದರೆ ನಿಮ್ಮನ್ನ ಕೆಳಗಿನಿಂದ ಹೆಕ್ಕಿಕೊಂಡು ಬರಬೇಕಾಗಿತ್ತು." ಸುಮ್ಮನಿರಿಸಿದೆ.
ಬಾಗಿಲು ತೆರೆಯಿತು,
ಮತ್ತೆ ನೂಕು ನುಗ್ಗಲು ಆರಂಭವಾಯ್ತು.
ಅಂತೂ ಒಳಹೊಕ್ಕೆವು, ದೇವರನ್ನು ನೋಡುತ್ತಲೇ ನನ್ನ ಹಿಂತಲೆಯಲ್ಲೊಂದು ವಿದ್ಯುತ್ ಸ್ಪರ್ಶವಾದಂತಾಯ್ತು.
ನಾನು ಯಾವುದೋ ಲೋಕದಲ್ಲಿದ್ದ ಹಾಗೆ ಅನ್ನಿಸಿತ್ತು.
ಅಂತೂ ತೀರ್ಥ ಪ್ರಸಾದ ತೆಗೆದುಕೊಂಡು ಮನೆಗೆ ಬಂದೆವು.
ಈಗಲೂ ಅದೇ ಗುಂಗಿನಲ್ಲಿದ್ದೇನೆ.
Comments
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by kamath_kumble
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by Jayanth Ramachar
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by kavinagaraj
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by prasannakulkarni
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by ksraghavendranavada
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by partha1059
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by raghumuliya
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by prati
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by gopaljsr
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by nagarathnavina…
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨
In reply to ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨ by saraswathichandrasmo
ಉ: ಮತ್ತೊಂದು ದಿವ್ಯ ಸಮ್-ದರ್ಶನ.... ೨