ರಮ್ಯಾ ವಿವಾದ - ಒಂದು ಪ್ರಶ್ನೆ.

ರಮ್ಯಾ ವಿವಾದ - ಒಂದು ಪ್ರಶ್ನೆ.

Comments

ಬರಹ

ರಮ್ಯಾ ಮತ್ತು ನಿರ್ಮಾಪಕ ಗಣೇಶ್ ನಡುವಿನ ಕದನ ಆರಂಭವಾಗಿದ್ದು ಗಣೇಶ್ ರವರ ಹೇಳಿಕೆಗಳು ಮಾಧ್ಯಮದಲ್ಲಿ ಬರುವ ಮೂಲಕ. ಧ್ವನಿಸುರುಳಿ ಕಾರ್ಯಕ್ರಮಕ್ಕೆ ರಮ್ಯಾ ಗೈರಾಗಿದ್ದರಿಂದ ಕೋಪಗೊಂಡ ಗಣೇಶ್ ಮಾಧ್ಯಮದ ಮೂಲಕ ರಮ್ಯಾ ಅವರ ಮೇಲೆ ಆರೋಪ ಹೊರಿಸಿದರು.


ನಂತರ ರಮ್ಯಾ ಅವರಿಗೇ ಗಣೇಶ್ ಹಣ ಕೊಡಲಿಕ್ಕಿರುವುದಾಗಿಯೂ ಅದರಿಂದಾಗಿಯೇ ರಮ್ಯಾ ಗೈರು ಹಾಜರಾಗಿದ್ದಾಗಿಯೂ ತಿಳಿದಾಗ ನಿರ್ಮಾಪಕರ ಸಂಘದ ಸಭೆಯಲ್ಲಿ ತೆಗೆದುಕೊಂದ ನಿರ್ಣಯ ಇಂತಿದೆ "ಗಣೇಶ್ ಅವರು ಬಾಕಿ ಹಣವನ್ನು ರಮ್ಯಾ ಅವರಿಗೇ ನೀಡಬೇಕು ಮತ್ತು ರಮ್ಯಾ ಅವರು ಚಿತ್ರದ ಪ್ರಚಾರದಲ್ಲಿ ಭಾಗವಹಿಸುವಂತೆ ಅವರನ್ನು ಒಪ್ಪಿಸಲಾಗುತ್ತದೆ".


ತೆಗೆದುಕೊಂಡ ಹಣವನ್ನೇನೋ ವಾಪಸು ಕೊಡಲು ನಿರ್ಮಾಪಕರು ಒಪ್ಪಿದರು, ಆದರೆ ವಿನಾಕಾರಣ ಮಾಧ್ಯಮ ಹೇಳಿಕೆ ನೀಡಿ ರಮ್ಯಾರ ಹೆಸರಿಗೆ ಧಕ್ಕೆ ತಂದಿದ್ದಕ್ಕಾಗಿ ಮಾಧ್ಯಮ ಮೂಲಕ ಅವರ ಕ್ಷಮೆ ಕೇಳಬೇಕಾಗಿದ್ದು ಅವರ ಧರ್ಮ ಅಲ್ಲವೇ....?


ನಾವು ಹಣ ಹಾಕುವವರು ಎಲ್ಲಾ ನಾವು ಹೇಳಿದಂತೆ ನಡೆಯಬೇಕು ಎಂಬ ನಿರ್ಮಾಪಕರ ವರ್ತನೆಯೂ ಸಹ ಕನ್ನಡ ಚಿತ್ರರಂಗದ ಸ್ಥಿತಿಗೆ ಕಾರಣ ಎನ್ನಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet