ಈಗಿನ ಹಣ, ಝಣ-ಝಣವೇ?

ಈಗಿನ ಹಣ, ಝಣ-ಝಣವೇ?

 ಪ್ರೀತಿಯ ಓದುಗರೆ,


ನಿಮ್ಮನ್ನು ಓದುಗರೆ ಎಂದು ಸಂಭೋಧಿಸುವುದರ ಬದಲಿಗೆ, ' ಜೋದುಗರೆ ' ಎನ್ನಬಹುದು. ಅಂದರೆ, Interner Surfer = ಜಾಲಿಗ.
ಜಾಲಿಗ ಓದುಗ = ಜೋದುಗ :)

ಈ ತಿಳಿನಗೆಯೊಂದಿಗೆ, ನಾವೀಗ ಈಗಿನ ಹಣದ ಮೌಲ್ಯವನ್ನು ವಿಶ್ಲೇಷಿಸೋಣ.

ಭಾರತ ದೇಶದಲ್ಲಿ 1995-2000 ನೇ ಇಸವಿಯ ಸಮಯದಲ್ಲಾದ ಐಟಿ / ಕೈಗಾರಿಕಾ ಕ್ರಾಂತಿಯು ನಮ್ಮ ಸಮಾಜದಲ್ಲಿ, ಆರ್ಥಿಕತೆಯಲ್ಲಿ ಹೊಸ ಅಲೆ ಎಬ್ಬಿಸಿತು. ಈ ಅಲೆಯೊಂದಿಗೆ ಮೇಲ್ಮಧ್ಯಮ ವರ್ಗದಲ್ಲಿನ ಜನ ಸಂಖ್ಯೆಯು ಗಣನೀಯವಾದ ಏರಿತು. ಇದರಲ್ಲಿ ಇದ್ದವರು ಸುಮಾರು 24ರಿಂದ 35 ವರ್ಷ ವಯೋಮಾನದವರು. ಇವರಲ್ಲಿ ಬಹಳಷ್ಟು ಜನರ ಬಳಿ ಹೈ ಡಿಸ್ಪೊಸಿಬಲ್ ಇನ್-ಕಮ್ (ಪೂರ್ತಿ ಖರ್ಚು ಮಾಡಬಲ್ಲ ಹಣ) ಕ್ರೂಢೀಕೃತವಾಯಿತು. ಇದೇ ಸಮಯದಲ್ಲಿ ನಮ್ಮ ದೇಶ 1991 ಇಸವಿಯಲ್ಲಿ ಸಹಿ ಮಾಡಿದ ಜಾಗತೀಕರಣ (ಗ್ಲೋಬಲೈಸೆಷನ್) ಒಪ್ಪಂದದ ಪರಿಣಾಮವಾಗಿ ಹೊಸ ಉತ್ಪನ್ನಗಳ ಹಾಗೂ ಬ್ರ್ಯಾಂಡುಗಳ ಹಾಗೂ ಅವುಗಳ ಅಬ್ಬರದ ಜಾಹೀರಾತುಗಳ ಸುರಿಮಳೆ ಶುರುವಾಯಿತು (ಈ ಮಳೆ ಇನ್ನೂ ನಿಂತಿಲ್ಲ, ಸಧ್ಯಕ್ಕೆ ನಿಲ್ಲೋ ಹಾಗೂ ಕಾಣಲ್ಲ). ಉದಾ: ಹೊಸ ಬಗೆಯ ತಿಂಡಿ-ತಿನಿಸುಗಳು ಹಾಗೂ ಅವುಗಳ ಫ್ರ್ಯಾಂಚೈಸೀಗಳು, ಹೆಲ್ತ್ ಕ್ಲಬ್ಬುಗಳು ಹಾಗೂ ಹೆಲ್ತ್ ಇಕ್ಯುಪ್ಮೆಂಟ್ಸ್-ಗಳು, ನಾನಾ ರೀತಿಯ ಉಡುಗೆ-ತೊಡುಗೆಗಳು, ಎಲೆಕ್ಟಾನಿಕ್ ಉಪಕರಣಗಳು, ಗ್ಯಾಡ್ಜೆಟ್ಟುಗಳು, ಹೊಸ ಮಾದರಿಯ ವಾಹನಗಳು, ಹೊಸ ಸೇವೆಗಳು, ಈ-ಬ್ಯಾಂಕಿಂಗ್‌, ವಿವಿಧ ರೀತಿಯ ಸಾಲಗಳು, ಕ್ರೆಡಿಟ್ / ಡೆಬಿಟ್ ಕಾರ್ಡುಗಳು ಹಾಗೂ ಇತರೆ....

ಈ ಎಲ್ಲ ಮೇಲ್ಕಂಡ ಉತ್ಪನ್ನಗಳನ್ನು ಕೊಳ್ಳುವ ಧಾವಂತದಲ್ಲಿ, ಕ್ರೆಡಿಟ್ / ಕ್ರೆಡಿಟ್ ಕಾರ್ಡುಗಳ ಬಳಕೆ ಹೆಚ್ಚಾಗಿ, ಸಾಲಗಾರರಾದವರ ಹೊಸ ವರ್ಗದ ಉದಯವೂ ಆಯಿತು :) . ಕ್ರೆಡಿಟ್ ಕಾರ್ಡುಗಳ ಪುರಾಣವನ್ನು ನನ್ನ ಇನ್ನೊಂದು ಬ್ಲರಹದಲ್ಲಿ* ನೋಡೊಣ.
*ಬ್ಲಾಗು + ಬರಹ = ಬ್ಲರಹ :)

ಓಕೆ... ಹೀಗಿರುವಾಗ,

‌ಹಂತ-ಹಂತವಾಗಿ, ಬ್ಯಾಂಕುಗಳು ಕೊಡುವ ಬಡ್ಡಿ ದರವನ್ನು ಕಡಿಮೆ ಮಾಡುವುದು, ಆದೇ ಜಾಗತೀಕರಣಾಸುರನ ಇನ್ನೊಂದು ಮುಖ.
ನಾನಿಲ್ಲಿ ಜಾಗತೀಕರಣದ ವಿರೋಧವನ್ನಂತೂ ಮಾಡುತ್ತಿಲ್ಲ. ಫಿಕ್ಸೆಡ್ ಡೆಪೊಜಿಟ್ / ಎನ್ ಎಸ್ ಸಿ / ಪೋಸ್ಟಲ್ ಡೆಪಾಸಿಟ್-ಗಳಿಗೆ ಕೊಡುತ್ತಿದ್ದ ಬಡ್ಡಿದರ ಈಗ ಗಣನೀಯವಾಗಿ ಇಳಿಮುಖವಾಗಿದೆ. ಮೇಲಾಗಿ ನಮ್ಮ ಆದಾಯ ತೆರಿಗೆಯಲ್ಲಿ ಉಳಿತಾಯಕ್ಕೆ ಮಿತಿಯನ್ನು ಹಾಕಲಾಗಿದೆ.

ಇಂಥ ಪರಿಸ್ಥಿತಿಯಲ್ಲಿ, ನಮ್ಮಂತಹ ಮಾವಿನ ಮನುಷ್ಯರಿಗೆ (ಆಮ್ ಆದ್ಮಿ) ಹಣವನ್ನು ಉಳಿತಾಯ ಮಾಡಿದರೆ ಹೆಚ್ಚಿನ ಮೂಲ್ಯ ಸಿಗುವುದೊ? ಅಥವಾ ಅದೇ ಹಣದಿಂದ ಎನನ್ನಾದರೂ ಕೊಂಡಾಗ ಆಗುವ ಸೌಲಭ್ಯದ / ಖುಷಿಯ ಮೌಲ್ಯ ಹೆಚ್ಚೊ? ಎಂಬ ಕನ್ಫ್ಯೂಷನ್.

ಅಬ್ಬರದ ಜಾಹೀರಾತುಗಳು ಈ ಮಾವಿನ ಮಾನವರನ್ನು ಸೀದಾ ಶೊರೂಮ್ ಗಳಿಗೆ ಕೈ ಬೀಸಿ ಕರೆದು ಡಿಸ್ಪೊಸಿಬಲ್ ಇನ್-ಕಮ್ ಅನ್ನು ಕಬಳಿಸಿಬಿಡುತ್ತವೆ, ಮೇಲಿನ ಕನ್ಫುಷನ್ ಗೆ ಜಾಗವನ್ನೇ ಬಿಡುವಿದಿಲ್ಲ.
(ಡಿಸ್ಪೋಸಿಬಲ್ ಇನ್-ಕಮ್ = ಉಳಿತಾಯ ಮಾಡಬಹುದಾದ ಹಣ)

ಇಂಥ ಪರಿಸ್ಥಿತಿಯಲ್ಲಿ, ಉಳಿತಾಯ ಮಾಡುವುದು ಕಷ್ಟಸಾಧ್ಯ ಆದರೆ ಅನಿವಾರ್ಯ. ಏಕೆಂದರೆ, ಈಗಿನ ಬಹುಪಾಲು ನೌಕರಸ್ಥರಿಗೆ ಪೆನ್ಷನ್‌ ಇಲ್ಲ! ಹಾಗೂ ಸದಾ ಮೇಲ್ಮುಖಿಯಾದ ಹಣದುಬ್ಬರದ (ಇನ್ ಫ್ಲೇಷನ್) ದರ, ಹಣದ ಮೌಲ್ಯವನ್ನು ಸದಾ ಕೆಳಮುಖಿಯನ್ನಾಗಿಸುತ್ತದೆ.

ನಮ್ಮ ವೃದ್ಧಾಪ್ಯ ನಮ್ಮ ಹೆಮ್ಮೆಯಾಗಬೇಕೆ ಹೊರತು ಹೊರೆಯಲ್ಲ. ಇದೇ ಧ್ಯೇಯದ ಮೇಲೆ ನನ್ನ ಮುಂದಿನ ಕೆಲವು ಬ್ಲರಹಗಳ್.

ಉಳಿತಾಯ ಮಾಡಲು ಕೆಲ ಉಪಾಯಗಳು.

1. ಏನಾದರೂ ಕೊಳ್ಳಬೇಕೆಂದಾಗ, ಅದನ್ನು 1 ತಿಂಗಳು ಮುಂದೆ ತಳ್ಳಿ. ಇದು ತುಂಬಾ ಪರಿಣಾಮಕಾರಿಯಾದ ಉಪಾಯ. ಈ ಉಪಾಯವನ್ನು ಡಿಫ್ಯೂಸ್ ಮಾಡಲೆಂದೇ (ಅ)ಸೀಮಿತ ಅವಧಿಯ ಸೇಲ್ ಗಳು / ಡಿಸ್ಕೌಂಟ್ ಗಳು / 1 + 1 ಫ್ರೀ ಗಳು ಇರುತ್ತವೆ. ಇಂಥ ಮಾಯಾಮೃಗಗಳಿಂದ ಜೋಕೆ!

2. ಕ್ರೆಡಿಟ್ / ಡೆಬಿಟ್ ಕಾರ್ಡುಗಳ ಬದಲಿಗೆ ಕ್ಯಾಷ್ (ನಗದು) ವ್ಯವಹಾರ ಮಾಡಿ. - 3 ತಿಂಗಳು ಎಲ್ಲ ಕಡೆ ನಗದು ರೂಪದಲ್ಲಿ ಹಣ ಕೊಟ್ಟು ನೋಡಿ. ಆಗಲೇ ನಿಮಗೆ ವ್ಯತ್ಯಾಸ ಗೊತ್ತಾಗುವುದು. ಈ ಉಪಾಯ ಬೇಧಿಸುವ ಮಾಯಾಮೃಗಗಳೆಂದರೆ, ಲಾಯಲ್ಟಿ ಪಾಯಿಂಟ್ ಪ್ರೊಗ್ರ್ಯಾಮ್ ಗಳು. ಇವುಗಳಿಂದಾಗುವ ಮೇಲ್ನೋಟದ ಲಾಭದ ಹಿಂದೆ ಲಾಬಿಯಿದೆ ಹುಷಾರ್!

3. ನಮ್ಮ ಹಿರಿಯರು ಅಂದರೆ, ನಮ್ಮ ಹಿಂದಿನ ಜನರೇಷನ್-ನವರ ಉಳಿತಾಯದ ಮನೋಭಾವನೆಯನ್ನು ಮನಸ್ಸೋಛ್ಛೆ ಅಂಗೀಕರಿಸಿ, ಅನುಸರಿಸುವುದು.

4. ಎಂಥದ್ದೇ ಪರಿಸ್ಥಿತಿಯಲ್ಲೂ ಸವಕಳಿಯುಳ್ಳ ಸರಕು (ಡಿಪ್ರಿಷಿಯೇಟಿಂಗ್ ಅಸ್ಸೆಟ್) ಗಳನ್ನು ಕೊಳ್ಳಲು ಸಾಲ ಮಾಡಬೇಡಿ. ಏಕೆಂದರೆ, ಸಾಲ ಎಂದರೆ ಆಗಲೇ ಸವಕುಳಿಯಾದ ಸರಕು (ಆಲ್‌-ರೆಡಿ ಡಿಪ್ರಿಷಿಯೇಟೆಡ್ ಗುಡ್). ಸಾಲ ಮಾಡಿ ಕಾರು (ಸ್ವ-ಬಳಕೆಗೆ) ಕೊಂಡ್ರೆ, ಅದು ಅರ್ಥಶಾಸ್ತ್ರದಲ್ಲಿ ಎರಡು ಪಟ್ಟು ಲಾಸು. ಸಾಲ = ಲಾಸ. (ಸಾಲ ಮಾಡಿ ಕಾರ್ ಕೊಂಡವರಿಗೆ ನೋ ಅಫೆನ್ಸಸ್ ಮೆಂಟ್).

5. ಯಾವುದೇ ಸೇವೆಗಳಿಗೆ ಪೋಸ್ಟ್‌-ಪೇಯ್ಡ್ ಚಂದಾದಾರರಾಗಿದ್ದಾರೆ, ಪ್ರಿ-ಪೇಯ್ಡ್ ಗೆ ಬದಲಾಯಿಸಿ. 6 ತಿಂಗಳಿನಲ್ಲಿ ಈ ಖರ್ಚಿನಲ್ಲಿ ಗಣನೀಯವಾದ ಇಳಿಕೆ ಕಾಣುವಿರಿ.

6. ಲಾಸ್ಟ್ ಬಟ್ ನಾಟ್ ಲೀಸ್ಟ್: ದಿನಾಲೂ ಖರ್ಚು-ವೆಚ್ಚಗಳ ಲೆಕ್ಕ ಬರೆಯಿರಿ. ಇದನ್ನ ಪ್ರತಿ ‌ತಿಂಗಳ ಅಂತ್ಯದಲ್ಲಿ ಬಜೆಟ್‌ ಜೊತೆ ಹೋಲಿಸಿ. ಮುಂದಿನ ತಿಂಗಳು ಬಜೆಟ್ - ಡೀವಿಯೇಷನ್ ಆದಷ್ಟು ಕಡಿಮೆ ಮಾಡಲು ಯತ್ನಿಸಿರಿ. ಈ 6ನೇಯ ಉಪಾಯವಿಲ್ಲದೆ ಮೇಲಿನ ಯಾವ ಉಪಾಯಗಳೂ ಬಹಳ ದಿನ ನಿಲ್ಲಲಾರವು.

ಜೋದುಗರೆ, ಟಾಟಾ, ಬಿರ್ಲಾ, ಬಿಲ್ ಗೇಟ್ಸ್ ಎಲ್ಲರೂ ಬಜೆಟ್‌ ಫಿಕ್ಸ್ ಮಾಡ್ತಾರೆ ಹಾಗೂ ಲೆಕ್ಕನೂ ಬರೀತಾರೆ. ಅವರಿಗೆ ಅದಕ್ಕೆ ಅಕೌಂಟ್ಸ್ ಸೆಕ್ಷ್ನನ್ ಇದೆ, ನಮಗೆ ನಾವೆ ಅಕೌಂಟ್ಸ್ ಸೆಕ್ಷನ್.... ನೀವೇನಾದರೂ ವಿಜಯ್‌ ಮಲ್ಯ ಆಗಿದ್ದರೆ ಮಾತ್ರ ಈ ಉಪಾಯಗಳ ಅವಶ್ಯಕತೆ ಇಲ್ಲ :)

 

ವಿಕಾಸ 

Rating
No votes yet