ಹೊನ್ನೇಮರಡಲ್ಲಿ ಶರಾವತಿ
ಕವನ
ಹೊನ್ನೇಮರಡಲ್ಲಿ ಶರಾವತಿ
ಈ ಕಟ್ಟೆಗಂಜಿ ಒತ್ತರಿಸಿಕೊಂಡು
ನಿಂತಿರುವ ಗಂಗೆಯಿವಳು
ಈ ನಾಡಿಗೆಲ್ಲ ಬಲು ಬೆಳಕ ತೋರಿ
ನಡೆಸಿರುವ ತಾಯಿಯಿವಳು ||
ಇವಳಾಚೆಯೀಚೆ ತುಸುಕೆಂಪು ಪಟ್ಟಿ
ಅದರಾಚೆ ಹಸಿರ ಸೊಭಗು
ಅ ಅಂಬುತೀರ್ಥದಿಂದಬುಧಿವರೆಗೆ
ನಡೆದಾರಿ ನಗುತಲಿಹುದು ||
ವನವಾಸದಲ್ಲಿ ಮೈಥಿಲಿಯ ದಾಹ
ತಣಿಸಲ್ಕೆ ರಾಮಚಂದ್ರ
ಈ ನದಿಯ ಹರಿಸಿ ಲಕ್ಷ್ಮಣನ ಕಳಿಸಿ
ದಾರಿಯನು ತೋರಿಸಿದ್ದ ||
ಕಾರದವಿಯಲ್ಲಿ ದಾರಿಗನು ತೆರಳೆ
ಕೋಪಿಸಲು ಜೋಗದಲ್ಲಿ
ಜಲಪಾತವಾಗಿ ಮುಂದಿಳುಕಿನಲ್ಲಿ
ಸಾಗಿದಳು ಚೆಲುವಿನಲ್ಲಿ ||
ಈ ಮಲೆಯ ಮಗಳು ಬಲು ಬಳುಕಿನವಳು
ಭೋರ್ಗರೆವ ಸಿಟ್ಟಿನವಳು
ತಾ ಧುಮುಕಿ ಧುಮುಕಿ ಆ ಶಕ್ತಿಯಿಂದ
ಬಲು ಬೆಳಕ ನೀದುತಿಹಳು ||
ಈ ಕಟ್ಟೆ ಹಿಂದೆ ನಿಂತಿರುವಳಲ್ಲ
ತನ್ನೊಕ್ಕಲುಗಳ ನುಂಗಿ
ಆ ದುಃ ಖದಲ್ಲಿ ನಿಶ್ಶಬ್ಧಳಾಗಿ
ಹೀಗಿರುವ ಪರಿಯ ನೋಡಿ ||
- ಸದಾನಂದ
Comments
ಉ: ಹೊನ್ನೇಮರಡಲ್ಲಿ ಶರಾವತಿ
In reply to ಉ: ಹೊನ್ನೇಮರಡಲ್ಲಿ ಶರಾವತಿ by raghumuliya
ಉ: ಹೊನ್ನೇಮರಡಲ್ಲಿ ಶರಾವತಿ
ಉ: ಹೊನ್ನೇಮರಡಲ್ಲಿ ಶರಾವತಿ
In reply to ಉ: ಹೊನ್ನೇಮರಡಲ್ಲಿ ಶರಾವತಿ by nagarathnavina…
ಉ: ಹೊನ್ನೇಮರಡಲ್ಲಿ ಶರಾವತಿ