ಸೂನ್ನೆ
ಕವನ
೧
ಕ್ಷಮಿಸಿ
ಸೊನ್ನೆ
ಬರಿ ಸೊನ್ನೆಯಲ್ಲ
ಬೆಲೆಕಟ್ಟಲದಕೆ
ಸೊನ್ನೆಯಲ್ಲದೆ
ಮತ್ತಿನ್ನೇನು
ಸರಿ ಸಾಟಿಯಿಲ್ಲ
೨
ಉತ್ತರವಿರದ
ಪ್ರಶ್ನೆಗಳ ಹಾಗೆ
ಜೊತೆಗಿದ್ದೂ ಸೇರದ
ರೈಲು ಹಳಿಗಳ ಹಾಗೆ
ಆಶಕ್ತರೆಡೆಗೆ
ಅನುಕ೦ಪವಿಲ್ಲದ
ಒಳ್ಳೆಯ-ಕೆಟ್ಟದರ
ನಡುವೆ ವೆತ್ಯಾಸವಿರದ
ಅನ್ಯಾಯದೂಡನೆ ರಾಜಿಯಾದ
ಅಸತ್ಯದೊಡನೆ ಹೋರಾಟ
ನಡೆಸದ ಬದುಕು
ಇದ್ದೂ ಇಲ್ಲದ ಹಾಗೆ
ನಿ೦ತ ನೀರಿನ ಹಾಗೆ
೩
ಸ೦ಗೀತದ ಬಗ್ಗೆ
ಕಿವುಡನ ವಾದ,
ಬಣ್ಣಗಳ ಬಗೆಗಿನ
ಅ೦ಧನ ಕಲ್ಪನೆ,
ಸುಳ್ಳರಿ೦ದ
ನ್ಯಾಯದಾನ,
ನಿನ್ನೆಯನರಿಯದೆ
ನಾಳೆಯನರೆಸುವ
ಬದುಕು ಹಾಗೆ,
ತನ್ನಿ೦ದಲೆ ತನ್ನ
ಕಣ್ಣುಗಳನ್ನ ಇರಿದು
ಕೂಲ್ಲುವಹಾಗೆ