ಇಂದಿನ ಕ್ರಿಕೆಟ್ ಪಂದ್ಯವನ್ನು ಭಾರತ ಗೆಲ್ಲುತ್ತದೆ!
ನಾನೇನೂ ಜ್ಯೋತಿಷಿಯಲ್ಲ, ಆದರೂ ಇಷ್ಟು ಖಂಡಿತವಾಗಿ ಇಂದಿನ ಪಂದ್ಯದ ಭವಿಷ್ಯ ಹೇಳುವುದು ಹೇಗೆ ಸಾದ್ಯ ಎಂದು ಆಶ್ಚರ್ಯವಾಯಿತೇ ? ಭಾರತ ಫೈನಲ್ಲಿಗೆ ಬಂದರೆ ಮಾತ್ರ ಐಸಿಸಿ ಗೂ ಲಾಭ. ಬೆಟ್ಟಿಂಗ್ ನವರಿಗೂ ಲಾಭ. ಆದ್ದರಿಂದ ಈ ಪಂದ್ಯವನ್ನು ಫಿಕ್ಸ್ ಮಾಡಿಯೇ ಮಾಡುತ್ತಾರೆ. ಭಾರತ ಫೈನಲ್ಲ ತನಕ ಬರುವುದು ಗ್ಯಾರಂಟಿ. ವಿಶ್ವಕಪ್ ಗೆಲ್ಲಲು ಮಾತ್ರ ಪ್ರಯತ್ನ ಪಡಲೇ ಬೇಕು. ಅದನ್ನೂ ಫಿಕ್ಸ್ ಮಾಡಿ ಭಾರತವನ್ನು ಸೋಲಿಸಿದರೂ ಆಶ್ಚರ್ಯವಿಲ್ಲ! ನನ್ನ ಪ್ರಕಾರ ಭಾರತವೇ ಈ ಸಲದ ರನ್ನರ್ ಅಪ್. ಆಸ್ಟ್ರೇಲಿಯ - ಜಿಮ್ಬಬ್ವೆಯಂತಹ ಪಂದ್ಯವನ್ನೇ ಫಿಕ್ಸ್ ಮಾಡಿರುವ ಡಿ-ಗ್ಯಾಂಗಿಗೆ ಇದೆಲ್ಲ ಮಾಮೂಲಿ ವಿಷಯ ಬಿಡಿ. ಭಾರತ ಇಂದಿನ ಪಂದ್ಯ ಸೋತರೆ ಬೆಟ್ಟಿಂಗ್ ನ ಕೋಟ್ಯಂತರ ಹಣ ಡಿ-ಗ್ಯಾಂಗ್ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಭಾರತ - ಪಾಕ್ ಸೆಮಿಫೈನಲ್ ತಪ್ಪಿ ಹೋಗುತ್ತದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋತರೆ ಕೋಮು ಹಿಂಸಾಚಾರ ಮಾಡುವ ಅವಕಾಶವನ್ನೂ ಅದು ಕಳೆದುಕೊಳ್ಳಲಿದೆ. ಅವರಿಗೆ ಬೇಕಾದ ಶಸ್ತ್ರಾಸ್ತ್ರ ಮಾರಾಟದಿಂದಲೂ ಲಾಭ ಪಡೆಯಬಹುದು. ಆದ್ದರಿಂದಲೇ ನಾನು ಹೇಳುತ್ತೇನೆ "ಇಂದಿನ ಕ್ರಿಕೆಟ್ ಪಂದ್ಯವನ್ನು ಭಾರತ ಗೆದ್ದೇ ಗೆಲ್ಲುತ್ತದೆ!"