ನೀನಿರಲು ಜೊತೆಗೆ
ಕವನ
ನೀನಿರಲು ಜೊತೆಗೆ
ಬೇರೇನು ಬೇಕೆನಗೆ
ನೀನೆನ್ನ ತನುಮನಕೆ
ಜೀವವಯ್ಯ
ಭವ್ಯ ವಿಶ್ವದಿ ಬೆರೆತ
ಸರ್ವಶಕ್ತಿಯು ನೀನೆ
ನೀನಿರಲು ಜೊತೆಗೆ ಭಯ-
-ವಿಲ್ಲವಯ್ಯ
ನಿರ್ಜೀವ ಜೀವ ನಡು-
-ವಣ ಬೇಧವನು ತೊರೆದು
ಸಕಲವನು ಸಲಹುತಿಹ
ಧಾತ ನೀನೆ
ಸರ್ವಗುಣ ಸರ್ವಮನ
ಅರಿತ ಸರ್ವಜ್ಞನೇ
ಎನ್ನ ಜಿಜ್ಞಾಸೆಯನು
ನೀಗಿಸಯ್ಯ
ದಿವ್ಯ ಪ್ರಭೆಯಲಿ ನಿನ್ನ
ರಮ್ಯದೊಡನಾಟದಲಿ
ಮೀವ ಬಗೆಯನು ಎನಗೆ
ಕರುಣಿಸಯ್ಯ
ನೀನು ನಿರ್ಮಿಸಿದಂಥ
ಸೃಜ್ಯ ವಸ್ತುವು ನಾನು
ಮೋಕ್ಷಾರ್ಥಿಯಾಗಿರುವೆ
ಬೆಳಗಿಸಯ್ಯ
Comments
ಉ: ನೀನಿರಲು ಜೊತೆಗೆ
ಉ: ನೀನಿರಲು ಜೊತೆಗೆ
ಉ: ನೀನಿರಲು ಜೊತೆಗೆ