ಸ್ವಲ್ಪ ಕಿವಿಗೊಟ್ಟು ಕೇಳಿ
ಕವನ
ಕೇಳುತ್ತಿಲ್ಲವೇ ನಿಮಗೆ ವೃಕ್ಷಗಳ ಅರಣ್ಯರೋದನ.
ಗರಗಸದ ಗರಗರದಿ,ಸರಪಳಿಯ ಜಣಜಣದಿ ಕೇಳದಿರಬಹುದು ಕ್ಷೀಣವೇದನ.
ಸ್ವಲ್ಪ ಕಿವಿಗೊಟ್ಟು ಕೇಳಿ,
ಯಂತ್ರಗಳ ತಂದು ಲಾರಿಗೇರಿಸುವಾಗ ಗುಟುಕು ಜೀವದ ಆಕ್ರಂದನ.
ಯಂತ್ರಗಳ ಆರ್ಭಟದಿ ಕೇಳದಿರಬಹುದು ನಿಮಗೆ ಶೋಕಗಾನ.
ಮತ್ತೆ ಕೇಳಿಸದಿರಲು ಒಂದರಿಂದೇ ಒಂದು ಹೊರಟ ಲಾರಿಗಳ ಬಳಿ ಆಲಿಸಿ,
ಬಿಗಿದು ಕಟ್ಟಿದ ವೃಕ್ಷಗಳ ಸಮೂಹ 'ಗಾಯ'ನ
ಆಗಲೂ ಕೇಳದಿರೇ ಬನ್ನಿ ಶಾಮಿಲಿಗೆ,
ಕೇಳಬಹುದು ಉದರ ಸೀಳುವಾಗಿನ ಗುಟುಕು ಜೀವದ ಏದುಸಿರಿನ ಆಲಾಫನ.
ಈಗಲೂ ಕೇಳಿಸದಿರೇ ನಿಮ್ಮ ಮನೆಯ ರೀಪು ಪಕಾಸುಗಳ ಬಳಿ ನಿಂತು ಆಲಿಸಿ,
ನಿಟ್ಟುಸಿರಿನ ತನನ.
ಮತ್ತೆ ಕೇಳಿಸದಿರೇ ಎದೆಯ ಮೇಲಿಡಿ ಕೈಯನ್ನ,ಕಳೆದುಕೊಂಡಿರಬಹುದು ನೀವು ಹೃದಯವನ್ನ.
Comments
ಉ: ಸ್ವಲ್ಪ ಕಿವಿಗೊಟ್ಟು ಕೇಳಿ
In reply to ಉ: ಸ್ವಲ್ಪ ಕಿವಿಗೊಟ್ಟು ಕೇಳಿ by Saranga
ಉ: ಸ್ವಲ್ಪ ಕಿವಿಗೊಟ್ಟು ಕೇಳಿ