ಒಗಟು ಬಿಡಿಸುವಿರಾ ?

ಒಗಟು ಬಿಡಿಸುವಿರಾ ?

ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದು
ಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ


ನನ್ನ ಉತ್ತರ ನಂತರ........ ಮತ್ತೆ ಸಿಗೋಣ. ನಿಮ್ಮವ ರಾಮಮೋಹನ.


೧ ಎತ್ತಿದರೆ ಏಳುವೆನು
  ಒತ್ತಿದರೆ ಬೀಳುವೆನು
  ಎಲ್ಲರಲೂ ನಾನಿಹೆನು
  ಮಾಮ್ಯಾರು ಹೇಳಣ್ಣ


೨ ಮುಟ್ಟಿದರೆ ಮರ್ಕಟ
  ತಟ್ಟಿದರೆ ಅಕಟಕಟ
  ಬಿಟ್ಟರೆ ಗಾಳಿಪಟ
  ನಾನ್ಯಾರು ಹೇಳಣ್ಣ


೩ ಅಸ್ತಮಿಸೆ ಮುಕ್ತಿಯು
  ಉದಯಿಸೆ ಶಕ್ತಿಯು
  ಮಧ್ಯಮವೆ ಯುಕ್ತಿಯು
  ನಾನ್ಯಾರು ಹೇಳಣ್ಣ


೪ ನನಗೆ ನಾನೆ ಸಾಟಿ
  ನಾನೇ ನನಗೆ ಮೇಟಿ
  ನಾನೆನಗೆ ಸಹಪಾಠಿ
  ನಾನ್ಯಾರು ಹೇಳಣ್ಣ


೫ ಬಾನಗಲ ನನ್ನಂಚು
  ನಾನಲ್ಲಿ ಕೋಲ್ಮಿಂಚು
  ನನಗೆ ನಾನೆ ಸಂಚು
  ನಾನ್ಯಾರು ಹೇಳಣ್ಣ
 

Rating
No votes yet