ಒಗಟು ಬಿಡಿಸುವಿರಾ ? ಉತ್ತರ ಸಿಕ್ಕಿತೆ ? ಇಲ್ಲಿದೆ ನೋಡಿ

ಒಗಟು ಬಿಡಿಸುವಿರಾ ? ಉತ್ತರ ಸಿಕ್ಕಿತೆ ? ಇಲ್ಲಿದೆ ನೋಡಿ

ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದು
ಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ


ನನ್ನ ಉತ್ತರ ನಂತರ........ ಮತ್ತೆ ಸಿಗೋಣ. ನಿಮ್ಮವ ರಾಮಮೋಹನ.


೧ ಎತ್ತಿದರೆ ಏಳುವೆನು
  ಒತ್ತಿದರೆ ಬೀಳುವೆನು
  ಎಲ್ಲರಲೂ ನಾನಿಹೆನು
  ಮಾಮ್ಯಾರು ಹೇಳಣ್ಣ


೨ ಮುಟ್ಟಿದರೆ ಮರ್ಕಟ
  ತಟ್ಟಿದರೆ ಅಕಟಕಟ
  ಬಿಟ್ಟರೆ ಗಾಳಿಪಟ
  ನಾನ್ಯಾರು ಹೇಳಣ್ಣ


೩ ಅಸ್ತಮಿಸೆ ಮುಕ್ತಿಯು
  ಉದಯಿಸೆ ಶಕ್ತಿಯು
  ಮಧ್ಯಮವೆ ಯುಕ್ತಿಯು
  ನಾನ್ಯಾರು ಹೇಳಣ್ಣ


೪ ನನಗೆ ನಾನೆ ಸಾಟಿ
  ನಾನೇ ನನಗೆ ಮೇಟಿ
  ನಾನೆನಗೆ ಸಹಪಾಠಿ
  ನಾನ್ಯಾರು ಹೇಳಣ್ಣ


೫ ಬಾನಗಲ ನನ್ನಂಚು
  ನಾನಲ್ಲಿ ಕೋಲ್ಮಿಂಚು
  ನನಗೆ ನಾನೆ ಸಂಚು
  ನಾನ್ಯಾರು ಹೇಳಣ್ಣ


ಮೇಲಿನ ಎಲ್ಲ ‘ನಾನ್ಯಾರು ಹೇಳಣ್ಣ‘ ಪ್ರಶ್ನೆಗೆ ನನ್ನ ಉತ್ತರ ‘ಮನಸ್ಸು‘
ನಿಮ್ಮ ಮನದಲ್ಲೂ ಇದೆ ಉತ್ತರ ಮೂಡಿದ್ದರೆ ನನ್ನ ಪ್ರಶ್ನೆ ಸರಿಯಾಗಿದೆ.


ಓದಿ ಸಹಕರಿಸಿದ ಎಲ್ಲರಿಗೂ ದನ್ಯವಾದಗಳು.


ಇಂತಿ ನಿಮ್ಮವ - ರಾಮಮೋಹನ
 

Rating
No votes yet