ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ?

ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ?

ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ?
ಮೊದಲೊಮ್ಮೆ ಎಲ್ಲೊ ಓದಿದ್ದೆ ಎಲ್ಲಿ ಅಂತ ಮರೆತಿದ್ದೀನಿ ಆದರು ಈ ಪ್ರಶ್ನೆಗೆ ಉತ್ತರ ಪ್ರಯತ್ನಿಸಿ
----
ತರ್ಕಶಾಸ್ತ್ರಪ್ರವೀಣರಾದ ಶಾಸ್ತ್ರಿಗಳೊಬ್ಬರು ಮರಣಹೊಂದಿ ಮೇಲೆ ಹೊರಟರು. ಮೇಲಿರುವ ಯಮರಾಯ ವಿನೋದಕ್ಕೆ ಎಂಬಂತೆ ಒಂದು ತರ್ಕಬದ್ದ ಸಮಸ್ಯೆ ಇವರಿಗಿಟ್ಟಿದ್ದ.
ಶಾಸ್ತ್ರಿಗಳು ಮೇಲೆ ಹೋಗುವಾಗಲೆ ಇವರಿಗೆ ಪಕ್ಕಪಕ್ಕದಲ್ಲಿ ಎರಡು ಮಹಾ ದ್ವಾರಗಳು ಗೋಚರಿಸಿದವು. ಅದರಲ್ಲಿ ಒಂದು ಸ್ವರ್ಗದ ದ್ವಾರವಾದರೆ ಇನ್ನೊಂದು ನರಕದ್ದು. ಆಯ್ಕೆ ಇವರದೆ. ಎಲ್ಲಿ ಬೇಕಾದರು ಹೋಗುವ ಸ್ವತಂತ್ರವಿತ್ತು. ಅದರೆ ಸಮಸ್ಯೆ ಅದಲ್ಲ ಅದರಲ್ಲಿ ಯಾವುದು ಸ್ವರ್ಗದ ಬಾಗಿಲು ನರಕದ ಬಾಗಿಲು ಎಂದು ಇವರಿಗೆ ತಿಳಿಯದು ಮತ್ತು ಯಾವುದೆ ಸೂಚನಪಲಕವಿಲ್ಲ ! .
ಎರಡು ದ್ವಾರದ ಮದ್ಯದಲ್ಲಿ ಒಬ್ಬ ಕಾವಲು ಗಾರನಿದ್ದಾನೆ ಅವನನ್ನು ಕೇಳಿದರೆ ಯಾವುದು ಯಾವ ಬಾಗಿಲು ಅಂತ ಹೇಳಿಬಿಡಿತ್ತಾನೆ. ಅಷ್ಟೆ ತಾನೆ ಅನ್ನಬೇಡಿ. ಅವನದು ವಿಚಿತ್ರ ನಿಯಮ ಒಂದು ದಿನ ಪೂರ್ತಿ ನಿಜವನ್ನೆ ಹೇಳುತ್ತಾನೆ ಮರುದಿನ ಸಂಪೂರ್ಣ ಸುಳ್ಳು ಹೇಳುತ್ತಾನೆ, ಮತ್ತೆ ನಿಜ ಅದೆ ರೀತಿಯ ಚಕ್ರ. ಈದಿನ ಅವನು ನಿಜ ಹೇಳುತ್ತಿದ್ದಾನೊ ಅಥವ ಸುಳ್ಳು ಹೇಳುತ್ತಿದ್ದಾನೊ ಎಂದು ಪಾಪ ಶಾಸ್ತ್ರಿಗಳಿಗೆ ಗೊತ್ತಿಲ್ಲ.
 ಮತ್ತು ಕಡೆಯದಾಗಿ ಮತ್ತೊಂದು ನಿಯಮ ಅವನು ಇವರ ಒಂದು ಪ್ರಶ್ನೆಗೆ ಮಾತ್ರ ಉತ್ತರಿಸುತ್ತಾನೆ !
                         NO SECOND QUESTION !

 

ಶಾಸ್ತ್ರಿಗಳು ಕಾವಲುಗಾರನನ್ನು ಏನೆಂದು ಪ್ರಶ್ನಿಸಬೇಕು ?

 


 

  (ಪಕ್ಕದಲ್ಲಿರುವ ಚಿತ್ರ ನೋಡಿ ಬೋರ್ಡ್ ಇದೆಯಲ್ಲ ಎನ್ನಬೇಡಿ ಆ ಸೂಚನ ಪಲಕ ಶಾಸ್ತ್ರಿಯವರಿಗಲ್ಲ ನಾವು ನೋಡಲು ಮಾತ್ರ)
 

Rating
No votes yet

Comments