ಹಾರ್ನ್ ಬೇಕಾ ?
ಸುಮಾರು ೨೦ ವರ್ಷಗಳಿಂದ ಈ ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದೇನೆ. ಹಾಗೆಯೆ ನಾಲ್ಕು ಚಕ್ರಗಳನ್ನು ಓಡಿಸಿದ್ದೂ ಉಂಟು. ಆದರೆ ಈಗ ೧೦ ವರ್ಷಗಳಿಂದೀಚೆಗೆ ವಾಹನ ದಟ್ಟಣಿಯಂತು ಅತಿಯಾಗಿ ಬಿಟ್ಟಿದೆ. ಈತ್ತೀಚೆಗೆ ಯಾವ ಮಟ್ಟ ತಲುಪಿದೆಯೆಂದರೆ ರಸ್ತೆಯಲ್ಲಿ ಓಡಾಡುವುದಿರಲಿ, ಪಾದಚಾರಿ ಮಾರ್ಗದಲ್ಲಿ ಓಡಾಡಲಿಕ್ಕೂ ಸಾದ್ಯವಿಲ್ಲದಷ್ಟು ವಾಹನ ದಟ್ಟಣಿ. ಕೊನೆಗೆ ಈ ವಾಹನದ ಸಹವಾಸವೇ ಬೇಡ ಬೆಳಗಿನ ಜಾವದಲ್ಲಾದರೂ ಸ್ವಲ್ಪ ನಿಶ್ಚಿಂತೆಯಿಂದ ಹೆಜ್ಜೆ ಹಾಕೋಣ ಎಂದು ಹೊರಟರೆ ಅದಕ್ಕೂ ಸಂಚಕಾರ ಬಂದಿದೆ ಏಕೆಂದರೆ ಆಗಲೂ ರಸ್ತೆಗಳಿಗೆ ಬಿಡುವಿಲ್ಲದಷ್ಟು ವಾಹನ ದಟ್ಟಣಿ ಇರುತ್ತದೆ.
ಅದು ಹಾಗಿರಲಿ ಬಿಡಿ, ಇದೇನು ಹೊಸ ವಿಷಯವಲ್ಲ ಬೆಂಗಳೂರಿಗರಿಗೆಲ್ಲಾ ಗೊತ್ತಿರುವುದೆ, ನಾನು ಹೇಳ ಹೊರಟಿರುವುದೇನೆಂದರೆ, ವಾಹನ ಓಡಿಸುವಾಗ ಸಾಧರಣವಾಗಿ ನಾನು ಗಮನಿಸಿರುವ, ನಾನೇನು ಎಲ್ಲರೂ ಗಮನಿಸಿರುವ ವಿಷಯವೆಂದರೆ, ಹೆಚ್ಚಿನ ಜನ ಅನಾವಶ್ಯಕವಾಗಿ ಹಾರ್ನ್ ಮಾಡುವುದು.
ಮುಂದ್ಗಡೆ ಹಂಪ್ ಬಂತು ಅಂತ ಬ್ರೇಕ್ ಹಾಕಿದ್ರೆ ಹಿಂದೆ ಹಾರ್ನ್, ಮುಂದ್ಗಡೆ ಕೆಂಪುದೀಪ ಇದೆ ಅಂತ ಗಾಡಿ ನಿಲ್ಲಿಸಿದ್ರೆ ಹಿಂದೆ ಹಾರ್ನ್. ಅದಕ್ಕೆ ಮೊನ್ನೆ ಹೀಗೆ ಹಿಂದೆ ಬಂದು ಹಾರ್ನ್ ಹೊಡ್ದೋರ್ಗೆ ನಿಲ್ಲಿಸಿ ಹೇಳ್ದೆ -‘ಇನ್ನೊಸ್ವಲ್ಪ ಜೋರಾಗಿ ಹಾರ್ನ್ ಮಾಡಿ ಸಾರ್ ನೋಡೋಣ ಪಕ್ಕಕ್ಕೆ ಹೋದ್ರೂ ಹೋಗ್ಬಹುದು ಈ ಹಂಪು‘ ಅಂದೆ. ಅವ್ರು ನನ್ನ ಮೇಲೆ ಕೆಳ್ಗೆ ನೋಡಿ ಮುಂದಕ್ಕೆ ಹೋದ್ರು. ಭವಿಷ್ಯ ಇವನ್ಯಾರೊ ತಿಕ್ಲ ಇರ್ಬೇಕು ಅಂನ್ಕೊಡ್ರೇನೊ.
ನಾನು ಹೇಳೊದು ಇಷ್ಟೆ. ಸಾಮಾನ್ಯಾವಾಗಿ ನಾವು ಹಾರ್ನ್ ಮಾಡುವ ಹೆಚ್ಚಿನ ಸಮಯದಲ್ಲಿ ಗಾಡಿಗೆ ಬ್ರೇಕ್ ಹಾಕಬೇಕಾಗಿರುವುದು ಅನಿವಾರ್ಯವಾಗಿರುತ್ತದೆ.
ಹಾಗೆಂದಾಗ ಯಾವ ಒಂದನ್ನು ಮಾಡದೆ ಪರಿಸ್ಥಿತಿಯನ್ನು ನಿಬಾಯಿಸಬಹುಸು ಎಂಬ ಬಗ್ಗೆ ಯೋಚಿಸಿದರೆ ಭಹುಷಃ ಹಾರ್ನ್ ಮಾಡದಿರ ಬಹುದೆನಿಸುತ್ತದೆ. ಏಕೆಂದರೆ ನಾವು ಹಾರ್ನ್ ಮಾಡಲಿ ಬಿಡಲಿ ಬ್ರೇಕ್ ಹಾಕುವುದಂತೂ ಗಟ್ಟಿ ಮಾಡಲೇಬೇಕು. ಹಾಗಾಗಿ ಹಾರ್ನ್ ಮಾಡದಲೆ ಬರಿ ಬ್ರೇಕ್ ಹಾಕಬಹುದಲ್ಲವೆ. ಒಂದು ಪಕ್ಷ ಬ್ರೇಕ್ ಹಾಕದಲೆ ಬರಿ ಹಾರ್ನ್ ನಿಂದ ಪರಿಸ್ಥಿತಿ ನಿಬಾಯಿಸಲು ಸಾದ್ಯವಾದರೆ, (ಬ್ರೇಕ್ ಸ್ವಲ್ಪವೂ ಹಾಕದೆ) ಆಗ ಹಾರ್ನ್ ಮಾಡೋಣ. ಇದು ಕೇಳಲಿಕ್ಕೆ ಸಣ್ಣ ವಿಷಯವೆನಿಸುತ್ತದೆ. ಆದರೆ ಎಲ್ಲರೂ ಸ್ವಲ್ಪ ನಿದಾನವಾಗಿ ಆಲೋಚಿಸಿ ನಿರ್ಧಾರ ಮಾಡಿದರೆ ಬೆಂಗಳೂರಿನಲ್ಲಿ ಎಷ್ಟೊ ಶಬ್ದಮಾಲೀನ್ಯ ಕಡಿಮೆ ಮಾಡಬಹುದು. ಈಗ ಸುಮಾರು ಒಂದು ೬ ತಿಂಗಳಿಂದ ಪ್ರಯತ್ನ ಮಾಡಿ ನಾನು ಗಾಡಿ ಓಡಿಸುವಾಗ ಹಾರ್ನ್ ಮಾಡುವುದನ್ನೇ ಮರೆತು ಬಿಟ್ಟಿದ್ದೇನೆ. ತುಂಬಾ ಸೊಗಸೆನ್ನಿಸುತ್ತದೆ. ನೀವೂ ಪ್ರಯತ್ನಿಸಿ. ನೋಡಿ. ಆಯ್ತು ಮತ್ತೆ ಟ್ರಾಫ಼ಿಕ್ನಲ್ಲಿ ಸಿಗ್ತಿನಿ.... ಬರ್ಲಾ
Comments
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by kavinagaraj
ಉ: ಹಾರ್ನ್ ಬೇಕಾ ?
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by abdul
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by partha1059
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by abdul
ಉ: ಹಾರ್ನ್ ಬೇಕಾ ?
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by raghumuliya
ಉ: ಹಾರ್ನ್ ಬೇಕಾ ?
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by gopinatha
ಉ: ಹಾರ್ನ್ ಬೇಕಾ ?
ಉ: ಹಾರ್ನ್ ಬೇಕಾ ?
In reply to ಉ: ಹಾರ್ನ್ ಬೇಕಾ ? by keshavmysore
ಉ: ಹಾರ್ನ್ ಬೇಕಾ ?