ದೇಶಗಳೂ ಪ್ರಜಾಪ್ರಭುತ್ವವೂ

ದೇಶಗಳೂ ಪ್ರಜಾಪ್ರಭುತ್ವವೂ

ಈಗ ನಮ್ಮ ಮಧ್ಯ ಪ್ರಾಚ್ಯ ದೇಶಗಳಲ್ಲಿ  ಬಂಡಾಯ ಶುರುವಾಗಿದೆ.ಲಿಬಿಯಾ ದೇಶದ ಗದ್ದಾಫಿ ಮೊದಲೇ ಅಮೇರಿಕಾದ ವಿರೋಧಿ.ಅವರನ್ನು ಬಗ್ಗು ಬಡೆಯಲು ಇದೇ ಸುಸಂಧಿ ಎಂದು ಪಾಶ್ಚಾತ್ಯ ದೇಶಗಳು ತಿಳಿದಿವೆ.

ಚೀನಾ ಯುವಜನತೆಯನ್ನು ನಿಷ್ಕರುಣೆಯಿಂದ ಕೊಂದಾಗ ಈ ಕಾಳಜಿ ಎಲ್ಲಿತ್ತು?

ಬರ್ಮಾದಲ್ಲಿ ಜನರಿಗೆ ಅಭಿಪ್ರಾಯ ಸ್ವಾತಂತ್ರ್ಯವಿಲ್ಲದೆ ದಶಕಗಳೇ ಸಂದರೂ ಈ ಕಾಳಜಿ ಎಲ್ಲಿದೆ?

ಈಗಲೂ ಸಿರಿಯಾ,ಜೋರ್ಡಾನ್ ಮುಂತಾದ ದೇಶಗಳ ಬಂಡಾಯಕ್ಕೆ ಬೆಂಬಲ ಏಕಿಲ್ಲ?

ತಿಬೇಟಿಯನರು ಹಲವು ದಶಕಗಳಿಂದ ದೇಶಭ್ರಷ್ಟರಾಗಿದ್ದರೂ ಅವರ ಕುರಿತು ಸಹಾನುಭೂತಿ ಏಕಿಲ್ಲ?

ನಾವೆಲ್ಲರೂ ಪಾಶ್ಚಾತ್ಯ ದೇಶಗಳ ಈ ತಾರತಮ್ಯ ಭಾವನೆಯನ್ನು ಖಂಡಿಸಬೇಡವೇ?

ಅಲಿಪ್ತ ದೇಶಗಳ ನೇತಾರ ಭಾರತ ಇದನ್ನು ಪ್ರತಿಭಟಿಸಬೇಡವೇ?

-ನಮಗೆ ಗದ್ದಾಫಿ ಮುಖ್ಯ ಅಲ್ಲ.ಅವರಲ್ಲದಿದ್ದರೆ ಮತ್ತೊಬ್ಬರು ಅಲ್ಲಿ ಆಳಬಹುದು.ಅದು ಅವರ ಆಂತರಿಕ ವಿಷಯ.

ಆದರೆ ,ಪಾಶ್ಚಾತ್ಯ ದೇಶಗಳ ಈ ವಿಚಿತ್ರ ವರ್ತನೆಯನ್ನು ನಾವು ಒಪ್ಪಬಹುದೇ?

 

Rating
No votes yet