ನಾನು ಮರೆಯಬೇಕೆನ್ನುತ್ತಿರುವುದು ನಿನ್ನನ್ನೇ ಅಲ್ಲವೆ? ಗಾದೆಗೊಂದು ಗುದ್ದು--೭೪
(೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ!
(೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತವಲ್ಲವೆಂಬ ಐತಿಹಾಸಿಕ ಸತ್ಯವು ವೈದ್ಯಕೀಯವಾಗಿ ನಿರ್ಧರಿತವಾದ ಕಾಲಕ್ಕೇ ಅದು ವೈದ್ಯಕೀಯ ಸತ್ಯವೆಂಬುದು ಐತಿಹಾಸಿಕವಾಗಿ ನಿರೂಪಿತವಾದುದು ಖಂಡಿತ ಕಾಕತಾಳೀಯವಲ್ಲ.
(೩೭೮) ನಾನು ಮರೆಯಬೇಕೆಂದು ಯತ್ನಿಸುತ್ತಿರುವ ವ್ಯಕ್ತಿ ನೀವೇ ಅಲ್ಲವೆ?
(೩೭೯) ನಮ್ಮ ಭವಿಷ್ಯದ ಬಗ್ಗೆ ಅದೆಷ್ಟು ಬರವಣಿಗೆಗಳು ಮೂಡಿಬಂದುಬಿಟ್ಟಿವೆಯೆಂದರೆ ಅವುಗಳ ಗತ ನೆನಪಿನ ಬಾದೆಯಿಂದ ಈಗಾಗಲೆ ನಾವುಗಳು ನರಳಲು ಆರಂಭಿಸಿ, ಭವಿಷ್ಯವನ್ನು ಭೂತದಂತೆ ಭಾವಿಸತೊಡಗಿಬಿಟ್ಟಿದ್ದೇವೆ!
(೩೮೦) ನಿಮ್ಮ ಗತಕಾಲ ಮತ್ತು ನೋವನ್ನು ಆದಷ್ಟೂ ಶೀಘ್ರವಾಗಿ ಹೂತುಬಿಡಿ. ಏಕೆಂದರೆ ಇಷ್ಟರಲ್ಲೇ ಅವುಗಳ ಪುನರುತ್ಥಾನ ಆಗುವುದು ಅನಿವಾರ್ಯವಾಗಿಬಿಟ್ಟಿದೆ!
Rating