ನಗು ಬಂದ್ರೆ ನಕ್ಕು ಬಿಡಿ-೪

ನಗು ಬಂದ್ರೆ ನಕ್ಕು ಬಿಡಿ-೪

 

 
ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ
 
ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ.
 
ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ)
ಬಗ್ಗೆ ಹೇಳ್ತಾಇದ್ರೆ ....
 
ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ.
 
ಟೀಚರ್ಗೋ ಸಿಟ್ಟು ನೆತ್ತಿಗೇರ್ಬಿಟ್ತು.
 
ಏ ತಿಮ್ಮ ಎಳೋ ಮೇಲೆ
 
ಹೇಳು ಕಾಲಗಳಲ್ಲಿ ಎಷ್ಟು ವಿಧ?
 
ಹೇಳ್ದೆ ಇದ್ರೆ ನಿನ್ನ ಹಲ್ಲು ಉದ್ರ್ ಸ್ತೀನಿ ಅಂದ್ರು.
 
ತಿಮ್ಮ ಅಂದ 
 
ಟೀಚರ್ ಕಾಲಗಳಲ್ಲಿ ಮೂರುವಿಧ.
 
ಟೀಚರ್ಗೋ ಪರಮಾಶ್ಚರ್ಯ
 
ಅವು ಯಾವುವು? ಅಂದ್ರು ಟೀಚರ್
 
ತಿಮ್ಮ ಹೇಳ್ದ 
 
೧)ರಾಹುಕಾಲ
೨)ಗುಳಿಕಕಾಲ
೩)ಯಮಗಂಡಕಾಲ
 
ಟೀಚರ್ ತಲೆ ಕೆಟ್ ಹೋಯ್ತು
 
ಅವು ಯಾವ್ ಯಾವಾಗ ಬರುತ್ತೇಂತ ಹೇಳು ಅಂದ್ರು
 
ತಿಮ್ಮ ಕಾನ್ಫಿಡೆನ್ಸಿಂದ ಹೇಳ್ದ
 
೧)ಟೀಚರ್ 
    ನಾನು ಯಾವಾಗ ಮನೆಯಿಂದ ಸ್ಕೂಲಿಗೆ ಬರ್ತೀನೋ ಅದು ರಾಹುಕಾಲ
 
೨)ಯಾವಾಗ ಕ್ಲಾಸ್ ಒಳಗೆ ಎಂಟ್ರಿ ಆಗ್ತೀನೋ ಅದು ಗುಳಿಕಕಾಲ.
 
೩)ಟೀಚರ್ ಬೇಜಾರ್ ಮಾಡ್ಕೊಬೇಡಿ ಎಲ್ಲಿವರ್ಗೂ  ಈ ಕ್ಲಾಸ್ನಲ್ಲಿ ನೀವು ವ್ಯಾಕರಣ ಪಾಠ ಮಾಡ್ತೀರೋ ಅಲ್ಲೀವರ್ಗೂ ಯಮಗಂಡ ಕಾಲ ಅನ್ ಬೇಕೆ?
 
ಪಾಪ  ಟೀಚರ್ ತಲೆ ತಿರ್ಗಿ ಬೀಳೋದೊಂದ್ ಬಾಕಿ
 
 
 
 
 
Rating
No votes yet

Comments