ಮತ್ತು -ಮತ್ತು- ಮತ್ತು

ಮತ್ತು -ಮತ್ತು- ಮತ್ತು

ಕವನ

ಮತ್ತು -ಮತ್ತು- ಮತ್ತು


 

 

 

 

 

 

 

 

 


ಯೋಚಿಸಿದರೆ ಈಗಲೂ  
ಅದೇ ಕನಸ ಕಣ್ಣಲ್ಲಿ ಅಂದಿನ
ಅದೇ ಭ್ರಾಮಕ ಲೋಕ
ದಿನದ ಕಡೆಗಣನೆ
ಇರುಳ ನಿದ್ದೆಯ
ಮುಂದುವರಿಕೆಯಲ್ಲಿ
ಅದೇ ಮುಂಗುರುಳ
ಮಂದಾನಿಲದಲ್ಲಿ  ಮತ್ತೆ ಮತ್ತೆ
ಭ್ರಮರವಾಗೋ ಆಸೆ
ಆವರಿಸೋ ಮತ್ತಿನಲ್ಲೂ
ಕಾವ್ಯಕನ್ನಿಕೆಯ
ಪ್ರೇಮದಾಸರೆಯ
ಗಮ್ಮತ್ತು
ಅದೇ ಕಡೆಗಣ್ಣ ಸಿಹಿವಿಷದ
ಸಾವಿರ ಸಾವಿರ
ಕುಡಿನೋಟದ ಚೂಪು
ಭ್ರಮೆ ಕರಗಿ ಹೊರಗಿಳಿದರೆ  
ಅದೇ ನಾನು ಮತ್ತು
ನಿನ್ನನೆನಪಿನ
ವಿಷಾದ ಗೀತದ  
ಗುಚ್ಛ

 

Comments