ಜಪಾನ್ ಸುನಾಮಿ:ಅಮೆರಿಕಾದ ಕೃತ್ಯವೇ?

ಜಪಾನ್ ಸುನಾಮಿ:ಅಮೆರಿಕಾದ ಕೃತ್ಯವೇ?

 

 

ಮೊದಲಿಗೆ ಜಪಾನ್ ನ ಈ ಶತಮಾನದ  ಭೀಕರ ಸುನಾಮಿಯಲ್ಲಿ ಮಾಡಿದವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಆಶಿಸೋಣ...

 

ಪ್ರಿಯ ಓದುಗರೇ ತಮಗೆಲ್ಲ  ಈಗೆ ಕೆಲ ದಿನಗಳ ಹಿಂದೆ ಜಪಾನ್ ನಲ್ಲಿ   ಭೀಕರ ಸುನಾಮಿಗೆ ಜಪಾನ್ ಜನತೆ ತತ್ತರಿಸಿದ್ದು ನೀವೆಲ್ಲ ನೋಡಿರಬಹುದು, ಕೇಳಿರಬಹುದು. ಟೀವಿಯಲ್ಲಿ  ಆ ದೃಶ್ಯಗಳನ್ನು ಅದರಲ್ಲೂ ದೈತ್ಯಾಕಾರದ ಅಲೆಗಳಿಗೆ ಸಿಕ್ಕು ಎಸ್ಟೋ ಎತ್ತರದ  ದೈತ್ಯ ಹಡಗುಗಳು, ಮನೆ, ಸೇತುವೆಗಳು, ಬೋರಲು ಬಿದ್ದುದನ್ನು  ಕಂಡಾಗ  ಮೈ-ಕೈಎಲ್ಲ  ನಡುಕವಾಗಿದ್ದು ಸತ್ಯ.

ಹಿಂದೊಮ್ಮೆ ಅಮೆರಿಕಾದ ಮಹಾ ಶಕ್ತಿಶಾಲಿ  ಅಣು ಬಾಂಬುಗಳ ದಾಳಿಗೆ ಒಳಗಾಗಿ  ನಂತರ ಅತಿ ವೇಗವಾಗಿ ಕಹಿ ಘಟನೆಗಳನ್ನೆಲ್ಲ ಮರೆತು ಎದ್ದು ನಿಂತು  ಆರ್ಥಿಕತೆಯಲ್ಲಿ ಸ್ವಾವಳಮ್ಬನೆಯಾನು ಸಾಧಿಸಿ ವಿಶ್ವದ ಅರ್ಥಿಕ ದೈತ್ಯ ಶಕ್ತಿಗಳಲ್ಲಿ ೨ ನೆಯ ಸ್ಥಾನವನ್ನ ಪಡೆದು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ  ಈ ಜಪಾನ್ ದೇಶ ಈ ಭೀಕರ ಸುನಾಮಿ ಮತ್ತು ಭೂಕಂಪಕ್ಕೆ  ತತ್ತರಿಸಿತು.

 

ಹಿಂದೆಲ್ಲ ಹಲವಾರು  ಸಲ ಭೂಕಂಪನ ಆಗಿದ್ದರೂ  ಈ ಮಟ್ಟದಲ್ಲಿ ಆಗಿರಲಿಲ್ಲ, ಆದರೆ ಮೊನ್ನೆಯ ಭೂಕಂಪ ಮತ್ತು ನಂತರದ ದೈತ್ಯ ಸುನಾಮಿ ಅಲೆಗಳು ಜಪಾನ್ ಅನ್ನು ದಿಕ್ಕೆಡುವಂತೆ ಮಾಡಿದವು. ಇಸ್ಟೆಲ್ಲಾ ಅನಾಹುತ  ಆಗುತ್ತಿರುವಾಗ ಅಲ್ಲಿಯೇ ಸಮುದ್ರಕ್ಕತಿರವಾಗಿದ್ದ  ಅಣು ವಿದ್ಯುತ್ ಸ್ಥಾವರಗಳಿಗೆ ಬೆಂಕಿ ಬಿದ್ದು, ಅದನ್ನು ತಹಂಬದಿಗೆ ತರಲಾಗದೆ  ಕೊನೆಗೆ ಬೇರೆ ದಾರಿ ಕಾಣದೆ ಸಮುದ್ರದ ಉಪ್ಪು ನೀರನ್ನು ಬಿಟ್ಟು ಸ್ಥಾವರವನ್ನು ತಂಪು ಮಾಡುವ ಕೆಲಸವಾಗಲಿ, ಮೇಲಿಂದ ಹೆಲಿಕ್ಯಾಪ್ಟರ್  ಗಳಲ್ಲಿ ಉಪ್ಪು ನೀರು ಸುರಿಯುವುದಾಗಲಿ ಯಾವುದೂ ಯೆಶಸ್ವಿಯಾಗದೆ  ಅಕ್ಕ-ಪಕ್ಕದ ಸಾವಿರಾರು ಜನರನ್ನ ಬೇರೆಡೆಗೆ ಅತಿ ಶೀಘ್ರದಲ್ಲಿ ಬೇರೆಡೆಗೆ  ಕೊಂಡೊಯ್ಯಬೇಕಾಯ್ತು.

 

ಹೀಗೆ ಭೂಕಂಪ, ಸುನಾಮಿ, ಕೊನೆಗೆ ಅದೆಲ್ಲ ಸಾಲದೆಂಬಂತೆ  ಈ ಅಣು ವಿಕಿರಣದ ಕಷ್ಟ ಬೇರೆ. ಮೊದಲಿನ ಎರಡು ಅಂದರೆ ಭೂಕಂಪ, ಸುನಾಮಿ ಯಲ್ಲಿ ಬದುಕುಳಿದವರು ಮುಂದೆ ಅದೆಂಗೋ ಬದುಕಿಗೆ ಹೊಂದಿಕೊಳ್ಳಬಹುದು  (ಹಳೆ ಕಹಿ ಘಟನೆ ಮರೆತು) ಆದರೆ ಈ ಮೂರನೆಯ  ವಿಪತ್ತು ಅಣು ವಿಕಿರಣದ ತೀವ್ರತೆಗೆ ಸಿಳುಕಿರುವವರು ಅವರ ಜೀವನ ಪೂರ್ತಿ ಮಾತ್ರವಲ್ಲದೆ ಅವರ ಮಕ್ಕಳು,ಮೊಮ್ಮಕ್ಕಳು, ಹೀಗೆ ಮುಂದಿನ ಹತ್ತು ವಂಶಗಳಿಗೆ ಆಗುವಸ್ಟು ಅಣು ವಿಕಿರಣವನ್ನು  ವರ್ಗಾಯಿಸುತ್ತ ಹೋಗಿ ಒಂದು ವಂಶವೇ  ಭೀಕರ ಅಣು ಸಂಭಂದಿ ರೋಗಗಳಿಗೆ ಬಲಿಯಾಗಬೇಕಾಗುತ್ತೆ.

 

ಇನ್ನು   ಈ ಅಣು ವಿಕಿರಣದ ಪ್ರಭಾವವನ್ನು ಜಪಾನೀಯರಿಗಿಂತ ಬೇರಾರು  ಚೆನ್ನಾಗಿ ಅರ್ಥ ಮಾಡಿಕೊಂಡಿರಲು ಸಾಧ್ಯವೇ ಇಲ್ಲ. (ಹಿರೋಷಿಮ ಮತ್ತು ನಾಗಸಾಕಿ ಮೇಲೆ ಬಿದ್ದ ಅಣು ಬಾಂಬುಗಳ ಪ್ರಭಾವಕ್ಕೆ ತುತ್ತಾದವರಲ್ಲಿ ಈಗಲೂ ನೂರೆಂಟು ರೋಗಗಳು ಬೆನ್ನು ಹತ್ತಿದ್ದು ಇದುವರೆಗೂ ವಾಸಿ ಮಾಡಲು ಆಗಿಲ್ಲ,ಹೀಗಿರುವಾಗ ಅದ್ರ ಭೀಕರತೆಯನ್ನು ಜಪಾನೀಯರಿಗಿಂತ ಬೇರದಿನ್ನ್ಯಾರು ತಾನೇ ಅರಿಯಲು ಸಾಧ್ಯ?) 

ಜಗತ್ತಿಗೆಲ್ಲ ರಫ್ತು  ಆಗುವ ಬಹು ಮುಖ್ಯ ಯಾಂತ್ರಿಕ ಬಿಡಿ ಬಾಗಗಳು ಕಚ್ಚ ವಸ್ತುಗಳಿಗೆ ಅದರಲ್ಲೂ ಕಾರು ತಯಾರಿಕೆಯ ಕಂಪನಿಗಳಿಗೆ  ಜಪಾನೇ  ಮುಖ್ಯ ರಫ್ತುದಾರ ರಾಷ್ಟ್ರ. ಇನ್ನು ಎಲೆಕ್ಟ್ರೋನಿಕ್  ವಸ್ತುಗಳಲ್ಲಿ ಈ ದೇಶದವರಂತೆ  ಹೊಸ ಹೊಸ ಉತ್ಪಾದನೆ ಮಾಡುವುದನ್ನು  ಬೇರಾವ ರಾಷ್ಟ್ರವೂ ಮಾಡಲು ಸಾದ್ಯವಿಲ್ಲ ಅನ್ಸುತ್ತೆ. ಇಂತಿಪ್ಪ ಈ ಶಾಂತಿಪ್ರಿಯ(ಹಿಂದೆ ಅಲ್ಲಿಯೂ ಯುದ್ಧ ದಾಹಿ ಕೆಲ ವ್ಯಕ್ತಿಗಳ ಕಾರಣದಿಂದ ಜಪಾನ್ ಅಣು ಬಾಂಬಿಗೆ ತುತ್ತಾಗಬೇಕಾಯ್ತು.ಇನ್ನು ಅಮೆರಿಕಾಗೆ ತಾನು ಕಂಡು ಹಿಡಿದ ಅಣು ಬಾಂಬನ್ನು ಪ್ರಯೋಗಿಸಿ ನೋಡಲು ರಸ್ತ್ರವೊಂದು ಬೇಕಿತ್ತು ಅದಕ್ಕೆ ಜಪಾನ್ ಅವಕಾಶ ಮಾಡಿಕೊಟ್ಟಿತು) ದೇಶ ತನ್ನ ಪಾಡಿಗೆ ತಾನು ಅಭಿವೃದ್ಧಿಯ  ನಾಗಾಲೋಟದಲ್ಲಿ ಸಾಗುತ್ತಿದ್ದರೆ ಅದಕ್ಕೆ ಬಾರೆ ಎಂಬಂತೆ ಈ ಸುನಾಮಿ ಭೂಕಂಪ ಮತ್ತು ಅಣು ವಿಕಿರಣದ  ಕಾಟ ಬೇರೆ.. ಈಗ ಮುಖ್ಯ  ವಿಷಯಕ್ಕೆ ಬರೋಣ,

ಹೀಗೆ ದಿನ ನಿತ್ಯದಂತೆ  ಇಂಟರ್ನೆಟ್ ನಲ್ಲಿ ಜಪಾನ್ ಸುನಾಮಿ ಬಗ್ಗೆ ಹುಡುಕುತ್ತಿದ್ದಾಗ , ನನಗೆ ಇಲ್ಲಿ  http://thatskannada.oneindia.in/news/2011/03/26/america-tunami-bomb-japan-tsunami-aid0135.html

ಕನ್ನಡದಲ್ಲಿ ಬರೆದ ಬರಹವೊಂದು ಸಿಕ್ಕಿತು , ಅದನ್ನು ಓದುತ್ತ ಹೋದಂತೆ  ನನಗೆ ಈ ಭೀಕರ ಭೂಕಂಪ ಮತ್ತು ಸುನಾಮಿ ಗಳ ಅವಘಡದ  ಹಿಂದೆ  ಈ ಅಮೇರಿಕದ ಕೈವಾಡ  ಇರಬಹುದೇ  ಎನ್ನುವ ಸಂಶಯ, ಅದನ್ನು ಓದಿದ ಎಲ್ಲರಂತೆ  ನನಗೂ ಮನದಲ್ಲಿ  ಸಂದೇಹ ಬಂದೆ ಬಿಡ್ತು.

 

ಈ ಅಮೆರಿಕಾದ ಹಿಂದಿನ ಇತಿಹಾಸ  ಗೊತ್ತಿರುವವರಿಗೆ  ಅಲ್ಲಿ ಆಳುವವರು ಅದೆಂತ  ಜನ ಅಂತ ಅರ್ಥವಾಗಿರುತ್ತೆ. ಸಣ್ಣ-ಪುಟ್ಟ ರಾಷ್ಟ್ರಗಳು  ಹೋಗಲಿ ದೊಡ್ಡ ದೊಡ್ಡ ರಾಷ್ಟ್ರಗಳು ತಮ್ಮ ಪಾಡಿಗೆ ತಾವು ಸ್ವತಂತ್ರವಾಗಿ  ಸುಖದಿಂದ ಬಾಳಲು ಸಹ ಈ ಅಮೇರಿಕ ಬಿಡುವುದಿಲ್ಲ.

ಈ ಅಮೆರಿಕಾದ ಬಗ್ಗೆ ಮೊದಲೇ ಇತಿಹಾಸದಲ್ಲಿ ಒಂದು ಹೇಳಿಕೆಯಿದೆ  ಅದು, ಈಗ ಅಲ್ಲಿರುವವರಾರು ಅಮೆರಿಕದಾದ ಮೂಲ ನಿವಾಸಿಗಳಲ್ಲ, ಬದಲಿಗೆ ಎಲ್ಲಿಂದಲೋ ಬಂದು, ಅಲ್ಲಿ ಮೊದಲಿದ್ದ ಮೂಲ ನಿವಾಸಿಗಳನ್ನ  ಕೊಂದು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರೆಂದು,ಇಂತಿಪ್ಪ ಈ ಅಮೇರಿಕ  ನಂತರ ವಿಯೆಟ್ನಾಂ , ಕ್ಯೂಬಾ, ವೆನುಜುಎಲ ,ಹೀಗೆ ಎಲ್ಲೆಲ್ಲಿ ತನ್ನ ಪ್ರದೇಶವನ್ನು, ಸಾಮರ್ಥ್ಯವನ್ನು  ವಿಸ್ತರಿಸಲು  ಆ ದೇಶಗಳನ್ನು ಮಣ್ಣು ಮುಕ್ಕಿಸಲು ಹೋಗಿ ತಾನೇ  ಮಣ್ಣು ಮುಕ್ಕಿದ್ದು ನಮಗೆಲ್ಲ ಗೊತ್ತು.

 

ಅಲ್ಲಿ ಮಣ್ಣು ಮುಕ್ಕಿದ್ದು ಸಾಲದೆಂಬಂತೆ ತನ್ನ ನೆರೆ ಹೊರಾಯ ರಾಷ್ಟ್ರಗಳು, ಹೋಗಲಿ ದೂರದ ರಾಷ್ಟ್ರಗಳ ಮೇಲೆ ಸಹಾ ಅದ್ರ ಕಣ್ಣು ಬಿದ್ದು, ಅದ್ರ ವಕ್ರ ಧ್ರುಸ್ಟಿಗೆ ಬಿದ್ದ ಮೊದಲ ಡುರಾಧ್ರುಸ್ತ ರಾಷ್ಟ್ರವೇ ಇರಾಕ್. ಇರಾಕ್ನಲ್ಲಿ  ಸಮೂಹ ನಾಶಕ ಶಸ್ತ್ರಗಳಿವೆ, ಅದು ಇದೆ ಇದು ಇದೆ ಅಂತೆಲ್ಲ  ,ಇರಾಕನ್ನು ತನ್ನ ಕೈವಶ ಮಾಡಿ ಅಲ್ಲಿನ ತೈಲವನ್ನು ಕೊಳ್ಳೆ ಹೊಡೆಯಲು  ಯೋಜನೆ ರೂಪಿಸಿ ಸದ್ದಾಂಗೆ ಧಮಕಿ ಹಾಕಿದರೂ, ಸದಾಂ ಮಾತ್ರ ಸುತಾರಾಂ  ಈ ಅಮೆರಿಕಾದ ಮಾತಿಗೆ ಬಗ್ಗಳೂ ಇಲ್ಲ ಜಗ್ಗಲೂ  ಇಲ್ಲ,

 

ಇನ್ನು ಸದ್ದಾಮ್ ಬಗ್ಗುವುದಿಲ್ಲ ನಟ ಗೊತ್ತಾದ ಕೂಡಲೇ ಈ ಅಮೇರಿಕ ತನ್ನಂತೆ  ಇತರ ಅವಕಾಶವಾದಿ ರಾಷ್ಟ್ರಗಳ ಜೊತೆಗೂಡಿ(ಬ್ರಿಟನ್,ಕೆನಡ,  ಮುಖ್ಯವಾಗಿ) ರಶಿಯಾ, ಚೀನಾ ಜೆರ್ಮನಿ  ದೇಶಗಳ  ವಿರೋಧದ ನಡುವೆಯೂ ಇರಾಕ್ ಗೆ ಸೈನ್ಯ ನುಗ್ಗಿಸಿ ಸಾವಿರಾರು ಅಮಾಯಕ ಜನರ ಹತ್ಯೆಗೈದುದ್ದು ಆಯ್ತು. ಇಸ್ಟೆಲ್ಲಾ ನಡೆಯುತ್ತಿದ್ದರೆ ಅಕ್ಕ-ಪಕ್ಕದ ಮುಸ್ಲಿಂ ರಾಷ್ಟ್ರಗಳ ಪೈಕಿ , ಇರಾನ್  ಮಾತ್ರ ವಿರೋಧಿಸಿತು,, ಆದರೆ ಸುಡಿ ಅರೇಬಿಯಾ ಸೇರಿದಂತೆ ಇನ್ನ್ಯಾವ ರಾಷ್ಟ್ರಗಳು  ಒಂದು ಖಂಡನ ಹೇಳಿಕೆಗಳನ್ನು ಕೊಡಲಿಲ್ಲ.

 

ಇರಾಕ್  ಅದ್ಯಕ್ಷ ಸದ್ದಾಮ್ ಮೊದಲೆಲ್ಲ ವೀರಾವೇಶದಿಂದ ಏನೇನೋ ಹೇಳಿಕೆ ಕೊಟ್ಟು(ಅದ್ರಲ್ಲಿ  ಶತ್ರು ದೇಶದವರು ನಮ್ಮ ನೆಲದಲ್ಲಿ ಕಾಲಿಟ್ಟರೆ ಅವರು ವಾಪಾಸ್ಸೇ ಹೋಗಲ್ಲ ಅವರನ್ನೆಲ್ಲ ಸಾಮೂಹಿಕವಾಗಿ ನಾಶ ಮಾಡುತ್ತೇನೆ ಅಂದ!) ಅಸಲಿಗೆ ಸಮೂಹನಾಶಕ ಶಸ್ತ್ರಗಳು  ಹಾಳಾಗಿ ಹೋಗಲಿ, ಅವನ ಹತ್ತಿರ  ಆಧುನಿಕವೆನ್ನುವಂತ  ಯಾವೊಂದು ಅಸ್ತ್ರವೂ ಇರಲಿಲ್ಲ.

ಅಲ್ಲೂ ಇಲ್ಲಿ   ಎಲ್ಲೆಲ್ಲೋ ಭೂಮಿಯಲ್ಲಿ ಆಳವಾದ ಕಂದಕವೊಂದರಲ್ಲಿ ಹಾಗೂ ಹೀಗೂ  ಬದುಕಿ,  ಕೊನೆಗೆ ತನ್ನವರೇ  ಈ ಸದ್ದಾಂನನ್ನ  ಅಮೆರಿಕಾದ ಕೈಗೆ ಹಿಡ್ಕೊಟ್ರು. ಅಮೇರಿಕಾದವರು ಅವನನ್ನ ಎಳೆದೊಯ್ದು ಸುಮ್ಮನೆ ವಿಚಾರಣೆ ನಡೆಸಿದಂತೆ ಮಾಡಿ, ಅವನ ಯಾವೊಂದು ಹೇಳಿಕೆಯನ್ನು ಕಿವಿಗೆ ಹಾಕಿಕೊಳ್ಳದೆ  ಏಕಮುಖ ನಿರ್ಧಾರವಾದ  ಮರಣ ದಂಡನೆಯನ್ನು ಸಹಾ ವಿದಿಸಿ ಅವನ  ಹತ್ಯೆ ಮಾಡಿತು.

 

ಇರಾಕ್ನಲ್ಲಿ ಈ ಸದ್ದಾಮ್ ಎಸ್ಟೊಂದು ಜನರ ಹತ್ಯೆ ಮಾಡಿದ್ದ ನಿಜ, ಆದರೆ  ಅವನ ದೇಶದಲ್ಲೇ ಅವನನ್ನ ವಿಚಾರಣೆ ಮಾಡಿ ಅವನ ದೇಶದವರೇ ಶಿಕ್ಷೆ ಕೊಟ್ಟು ಏನೆಲ್ಲಾ ಮಾಡಬಹುದಿತ್ತು ಆದರೆ ಈ ಅಮೇರಿಕ  ಎಲ್ಲದರಲ್ಲೂ ತಲೆ ಹಾಕುತ್ತಿದೆ. ಈಗ ಅದರ ಕಣ್ಣು ಇರಾನ್ ಮೇಲೆ ಬಿದ್ದಿದ್ದು  ಮುಂದೇನಾಗುತ್ತೋ ಗೊತ್ತಿಲ್ಲ. ಸದ್ಯಕ್ಕೆ ರಸಿಯಾಗೆ ಅಮೇರಿಕ ಕಂಡರೆ ಆಗಲ್ಲ, ಚೀನಾಕೂ ಅಮೇರಿಕ ಕಂಡರೆ ಆಗಲ್ಲ, ಜೆರ್ಮನಿಗೆ
ಅಮೆರಿಕಾವೂ ಬೇಕು, ರಶಿಯಾ ಚೀನಗಳು ಬೇಕು.

 

ಈ ಅಮೇರಿಕಾ,  ದೇಶ ದೇಶಗಳ ಮದ್ಯೆಯೇ ಕಲಹ ಆಗುವಂತೆ ಮಾಡಿ ಎರಡೂ ದೇಶಗಲವರಿಗೆ ನಗದಿನಲ್ಲಿ ಕೆಲವೊಮ್ಮೆ ಸಾಲದ ರೂಪದಲ್ಲಿ ಸಹಾ ಶಸ್ತ್ರಾಸ್ತ್ರಗಳನ್ನು (ಆ ಶಶ್ತ್ರಾಸ್ತ್ರಗಳು  ಅಮೇರಿಕಾದವರು ಈಗ ಉಪಯೋಗಿಸುವುದೂ ಇಲ್ಲ .ಇವನ್ನೇ ಬೇರೆ ದೇಶದವರು ಮಹಾ ಪ್ರಸಾದ ಎಂಬಂತೆ ತೆಗೆದುಕೊಳ್ಳುತ್ತಾರೆ.
) ಮಾರಿ  ಅತ್ತ ಕಡೆ ಅವರಿಗೆ ಹಣವೂ ಬಂತು, ಹಾಗೆ ತಮ್ಮ ತಲೆ ಹಾಕಲೂ  ಅವಕಾಶ ಸಿಕ್ಕಂತಾಯ್ತು.

ಇಸ್ಟೆಲ್ಲಾ  ಇತಿಹಾಸ ಇರುವ ಈ ಅಮೇರಿಕ  ದೇಶ  ಜಪಾನ್ ಹತ್ತಿರದ ಸಮುದ್ರದಾಳದಲ್ಲಿ  ಅಣು ಬಾಂಬನ್ನು ಸಿಡಿಸಿ  ಭೂಕಂಪ್ ಉಂಟು ಮಾಡಿ ಅದು ಸುನಾಮಿಗೆ ಕಾರಣವಾಗುವಂತೆ ಮಾಡಿರಬಹುದೇ  ಎಂಬ ಸಂಶಯ ಈಗ  ಕೆಲ ದೇಶಗಲ್ಲಿ ವ್ಯಾಪಕ ವಾಗ ಹಬ್ಬುತ್ತಿದೆ.

 

ಆದರೆ ಇದರಿಂದ ಅಮೆರಿಕಾಗೆ ಏನು  ಲಾಭ? ಒಂದು ಊಹೆಯಂತೆ,ಜಪಾನನ್ನು ಕೈವಶ   ಮಾಡಿಕೊಳ್ಳಲು  ಅಮೆರಿಕಾಗೆ  ಸಾಧ್ಯವಿಲ್ಲ, ಆದರೆ ಈ ತರಹದ  ಘಟನೆಗಳನ್ನು ಉಂಟುಮಾಡಿ ಆರ್ಥಿಕ ವ್ಯವಸ್ಥೆಯನ್ನ  ಬುಡಮೇಲು ಮಾಡಿ ತಾನೇ ಜಗತ್ತಿನ ಸರ್ವ ಶಕ್ತ ರಾಷ್ಟ್ರ  ಆಗಬೇಕು ಎನ್ನುವುದಾಗಿರಬಹುದು. ಎಲ್ಲರಿಗೆ ಗೊತ್ತಿರುವಂತೆ ಈ ನಡುವೆ  ಅಮೆರಿಕಾದ ಅರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟು  ಹೋಗುತ್ತಿದ್ದು  ಅದನ್ನು ತಹಂಬದಿಗೆ  ತರಲಾಗದೆ ಅಮೇರಿಕ ಆಯಾಸ ಪಡುತ್ತಿದೆ.

ಈಗ  ಭವಿಸ್ಯದಲ್ಲಿ  ಅಮೇರಿಕ ಭಾರತದ ಮೇಲೂ ಇಂತ ಪ್ರಯೋಗ ಮಾಡಬಹುದೇನೋ. ಜಪಾನ್ ಬಗ್ಗೆ ಗೊತ್ತಿರುವವರಿಗೆ  ಅದೆಂತ ಮುಂದುವರೆದ ದೇಶ, ತಂತ್ರಜ್ಞಾನ ದ ನಾಡು ಅಂತ ಗೊತ್ತೇ ಇರುತ್ತೆ. ಇಂತಿಪ್ಪ ಆ ದೇಶದವರೇ, ಭೂಕಂಪ, ಸುನಾಮಿ  ಅಣು ವಿಕಿರಣ ಸೋರಿಕೆ ಆದ ಮೇಲೆ   ಅದ್ಯಾವುದನ್ನು ತಡೆಯಲೇ ಆಗದೆ, ಅಸಹಾಯಕರಂತೆ  ಕೈ ಚೆಲ್ಲಿ ನಿಂತುದನ್ನು ಕಂಡಾಗ, ಭವಿಸ್ಯದಲ್ಲಿ ಭಾರತದಲ್ಲಿ ಈ ತರಹದ್ದು ಏನಾದರೂ ನಡೆದರೆ  ಅದನ್ನು ನಿಯಂತ್ರಿಸಲು ನಾವೆಸ್ಟು ಸನ್ನದ್ಧರಾಗಿದ್ದೇವೆ?

ನಮ್ಮ ದೇಶದಲ್ಲೂ ಸಹ ತುಂಬಾ  ಅಣು ವಿದ್ಯುತ್  ಸ್ಥಾವರಗಳು ಸಮುದ್ರ ಪಕ್ಕದಲ್ಲೇ ಇದ್ದು , ಜಪಾನ್ ತರಹದ್ದು ಏನಾದರೆ ನಡೆದರೆ  ಮುಂದೇನಾಗಬಹುದು ನಮಗೆಲ್ಲ ಗೊತ್ತು. ನಮ್ಮ ದೇಶದ ಪರಿಸ್ಥಿತಿ ,ಇಲ್ಲಿಯ ವ್ಯವಸ್ತೆ  ಅವ್ಯವಸ್ಥೆ, ಗೊತ್ತಿರುವವರಿಗೆ ಇಲ್ಲಿ ಆ ತರಹದ್ದು ಏನಾದರೂ ಆದ್ರೆ ಅದೆಂತ ಸಹಾಯ ನಮಗೆ ಸರಕಾರ ಕಡೆಯಿಂದ ಸಿಗಬಹುದು  ಎಂದು ಯೋಚಿಸಿಯೇ ಹಣೆ ಮೇಲೆ ಬೆವರು ಮೂಡುವುದು ಖಾತ್ರಿ!

ಮೊದಲೇ ನಾವೀಗ  ಮುಂದುವರೆಯುತ್ತಿರುವ ರಾಷ್ಟ್ರ , ತಂತ್ರಜ್ಞಾನದ  ವಿಜ್ಞಾನದ ಹೀಗೆ ಎಲ್ಲೆಲ್ಲೂ (ಬ್ರಷ್ಟಾಚಾರದಲ್ಲಂತೂ  ನಮ್ಮನ್ನು ಮೀರಿಸುವವರೇ ಇಲ್ಲ!) ಮುಂದಿದ್ದೇವೆ, ಅಮೆರಿಕಾದ ವಕ್ರ ಧ್ರುಸ್ತಿ ನಮ್ಮ ಮೇಲೆ ಬೀಳದಿರಲಿ ಎಂದೇ ನಾವು ಆಶಿಸಬೇಕು. ಆಶಿಸೋಣ..

ಓದಿಯಾದ ಮೇಲೆ ದಯಮಾಡಿ ತಂತಮ್ಮ ಅನಿಸಿಕೆಗಳನ್ನ  ಹಂಚಿಕೊಳ್ಳಿ,ನಿಮಗೂ ಈ ತರಹದ್ದು ಸುದ್ಧಿ ಸಿಕ್ಕಿದ್ದರೆ ಲಿಂಕ್ ಕೊಡಿ .......

 

 

 

 

 

 

 

http://thatskannada.oneindia.in/news/2011/03/26/america-tunami-bomb-japan-tsunami-aid0135.html