ಭಾರತ ಪಾಕ್ ಸೆಮಿಫೈನಲ್ ಪಂದ್ಯ..

ಭಾರತ ಪಾಕ್ ಸೆಮಿಫೈನಲ್ ಪಂದ್ಯ..

ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿದ ಮರುಕ್ಷಣದಿಂದಲೇ  ಕ್ರಿಕೆಟ್ ಪ್ರೇಮಿಗಳಲ್ಲಿ ಏನೋ ಒಂದು ರೀತಿ ಖುಷಿ, ಸಂತೋಷ, ಸಂಭ್ರಮ, ಆತಂಕ, ರೋಚಕತೆ, ಕುತೂಹಲ ಮನೆ ಮಾಡಿರುವ ಸಂಗತಿ ಸುಳ್ಳಲ್ಲ. ಅದಕ್ಕೆ ಕಾರಣ ಭಾರತ ತನ್ನ ಉಪಾಂತ್ಯ ಪಂದ್ಯವನ್ನು ತನ್ನ ಕಟ್ಟಾ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಬೇಕಿರುವುದು. ಎಲ್ಲೆಡೆ ನೋಡಿದರೂ ಇದೆ ಮಾತು, ಇದೆ ಚರ್ಚೆ. ಟಿ.ವಿ ಯಲ್ಲಿ ಮೂರು ದಿನದಿಂದ ಬುಧವಾರ ನಡೆಯಲಿರುವ ಈ ಪಂದ್ಯದ ಬಗ್ಗೆಯೇ ಮಾತುಕತೆ. ರೇಡಿಯೋ ಗಳಲ್ಲಿ ಕೂಡ ಇದೆ ಸುದ್ದಿ. ಕೆಲವು ಕಡೆ ಜನ ಭಾರತ ಫೈನಲ್ ಗೆಲ್ಲದಿದ್ದರೂ ಪರವಾಗಿಲ್ಲ ಪಾಕ್ ವಿರುದ್ಧ ಸೋಲಬಾರದು (ಫೈನಲ್ ಗೆ ಬರಬೇಕೆಂದರೆ ಪಾಕ್ ವಿರುದ್ಧ ಗೆಲ್ಲಲೇಬೇಕು ಎಂಬುದನ್ನು ಮರೆತಿದ್ದಾರೆ). ಇದಕ್ಕೆಲ್ಲ ಕಾರಣ ಏನಿರಬಹುದು

೧. ಭಾರತದ ಬಗ್ಗೆ ದೇಶಾಭಿಮಾನ

೨. ಪಾಕಿಸ್ತಾನದ ಬಗ್ಗೆ ದ್ವೇಷ

೩. ಕ್ರಿಕೆಟ್ ಬಗ್ಗೆ ಆಸಕ್ತಿ.

ಇನ್ನು ಪಂದ್ಯವನ್ನು ಮೈದಾನದಲ್ಲೇ ಪ್ರತ್ಯಕ್ಷವಾಗಿ ನೋಡಬೇಕೆಂದು ಜನ ಕಾಳಸಂತೆಯಲ್ಲಿ ಸಿಕ್ಕಾಪಟ್ಟೆ ಹಣ ತೆತ್ತು ಟಿಕೆಟ್ ಖರೀದಿಗೆ ಮುಂದಾಗಿದ್ದಾರೆ. ೩೦೦೦ ದ ಟಿಕೆಟ್ ಬೆಲೆ ೩೫೦೦೦, ೧೫೦೦೦ ದ ಟಿಕೆಟ್ ಬೆಲೆ ಒಂದು ಲಕ್ಷ ಕೊಟ್ಟು ಖರೀದಿಸುತ್ತಿದ್ದಾರಂತೆ. ಮೈದಾನದಲ್ಲಿ ಪ್ರತ್ಯಕ್ಷವಾಗಿ ಪಂದ್ಯ ವೀಕ್ಷಣೆಯ ಪ್ರಯೋಜನಕ್ಕಿಂತ ಅಪ್ರಯೋಜನಗಳೇ ಜಾಸ್ತಿ ಎಂದು ನನ್ನ ಅನಿಸಿಕೆ.  ಏನೋ ಒಟ್ಟಿನಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಈಗ ಭಾರತ ಗೆಲ್ಲಬೇಕು ಎಂಬ ಮಾತನ್ನು ಕೇಳಿ ನನಗೆ ಅತೀವ ಆನಂದವಾಗುತ್ತಿದೆ. ನೋಡೋಣ ಏನಾಗುತ್ತದೋ...

ಜೈ ಹಿಂದ್, ವಂದೇ ಮಾತರಂ
Rating
No votes yet