ನಗೆಯ ಅರ್ಥ-ಬಾಳ ತತ್ವ

ನಗೆಯ ಅರ್ಥ-ಬಾಳ ತತ್ವ

ಕವನ

ಅರಳಿ ನಗುವ ಹೂವೇ
ನಿನ್ನ, ನಗೆಯ ಅರ್ಥವೇನೆ?
ಕ್ಷಣಿಕ ಬಾಳೆಂಬ ನೋವೆ
ಸಾರ್ಥಕವೆಂಬಾ ನಲಿವೆ.

ತರುಲತೆಗಳ ಅಂದ ನೀ ಹೆಚ್ಚಿಸುವೆ
ಕಂಪ ಸೂಸಿ ಆನಂದ ನೀಡುವೆ
ಹೆಂಗಳೆಯರ ಮುಡಿಗೇ ಏರುವೆ
ಭಗವಂತನ ಅಡಿಗೆ ಎರಗುವೆ.

ನಿನಗಿಲ್ಲ ನಾಳೆಯೆಂಬ ಗೊಡವೆ
ವರ್ತಮಾನದೊಳೇ ಜೀವಿಸುವೆ
ನಡೆಸಿದರು ದಿನದೊಂದು ಬಾಳುವೆ
ಮುದ ನೀಡಿ ಧನ್ಯತೆಯ ಹೊಂದುವೆ.

ಸೋಲಲ್ಲವದು ನಿನ್ನ ಗೆಲುವೇ
ನೋವಲ್ಲ, ತೃಪ್ತಿಯಾ ನಲಿವೇ
ನಿನ್ನೀ ಬಾಳಿನ ತತ್ವವೇ
ನನ್ನದಾಗಲಿ ಓ ಹೂವೇ .

Comments