ಕಣ್ಣೀರಿನ ಪ್ರಭಾವ

ಕಣ್ಣೀರಿನ ಪ್ರಭಾವ

ಈಗ್ಗೆ ಸುಮಾರು ೩೪ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಬರುತ್ತದೆ. ನಮ್ಮ ಸ್ನೇಹಿತೆಯೊಬ್ಬರು ತೀವ್ರ ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರಿದ್ದರು. ಮನೆಯಲ್ಲಿ ನನ್ನ ಇಬ್ಬರು ಚಿಕ್ಕ ಮಕ್ಕಳು ಮತ್ತು ನನ್ನವರು ಇದ್ದರು. ರಾತ್ರಿಹೊತ್ತಿನಲ್ಲಿ ಸ್ತೀಯರ ವಾರ್ಡಿನಲ್ಲಿ ಪುರುಷರು ಇರುವ ಹಾಗಿರಲಿಲ್ಲ. ಹೀಗಾಗಿ, ರಾತ್ರಿ ಅವರ ಜೊತೆ ಇರಲು ನಾನು ಹೋಗಬೇಕಾಗಿತ್ತು. ಅವರಿಗೆ ಬೇಕಾದ ವಥ್ಯದ ಅಡಿಗೆ ಮಾಡಿಕೊಂಡು ಹಾಲು, ನೀರು ಎಲ್ಲಾ ತೆಗೆದುಕೊಂಡು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಎಷ್ಟು ಹೊತ್ತಾದರೂ ಒಂದೂ ಬಸ್ ಬರಲಿಲ್ಲ


.


ಹೀಗೆ ಚಡಪಡಿಸುತ್ತಾ ನಿಂತಿರಬೇಕಾದರೆ ಕೆ.ಆರ್..ಸಿ ಕ್ಯಾಂಪಸ್ ನಿಂದ ಒಂದು ಬಸ್ಸು ಬಂತು. ನಾನು ಕೈಬೀಸುವುದನ್ನು ನೋಡಿ, ಚಾಲಕ ಬಸ್ಸನ್ನು ನಿಲ್ಲಿಸಿದ. ಹಿಂದೆ ಮುಂದೆ ಆಲೋಚಿಸದೆ ಬಸ್ಸು ಹತ್ತಿಬಿಟ್ಟೆ. ನನ್ನನ್ನು ಹತ್ತಿಸಿಕೊಳ್ಳಬಾರದೆಂದು ಬಸ್ಸಿನಲ್ಲಿದ್ದವರು ಗಲಾಟೆ ಶುರು ಮಾಡಿದರು. ನನಗೆ ಕುಳಿತುಕೊಳ್ಳಲೂ ಸ್ಥಲವಿರಲಿಲ್ಲ. ಬಸ್ಸಿನಲ್ಲಿದ್ದವರೆಲ್ಲಾ


ಮಂಗಳೂರಿನ ಒಂದು ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಅವರೆಲ್ಲಾ ಕೆ.ಆರ್..ಸಿ ಯಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲು ಬಂದಿದ್ದರು. ಪಂದ್ಯದಲ್ಲಿ ಗೆದ್ದ ಸಂತೋಷಕ್ಕೆ ಅವರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕಂಠಪೂರ್ತಿ ಕುಡಿದಿದ್ದರು. ಅವರ ಅಡ್ಡಾದಿಡ್ಡಿ ಮಾತು, ತೂರಾಟ ನೋಡಿ ನನ್ನ ಜಂಘಾಬಲ ಉಡುಗಿಹೋಯಿತು. ನಾನು ಮಂಗಳೂರಿಗೆ ಹೋಗಲೇಬೇಕಾದ್ದರಿಂದ ಬೇರೆ ದಾರಿಯೇ ಇರಲಿಲ್ಲ. ಹಾಗೂ ಹೀಗೂ ಧೈರ್ಯ ತಂದುಕೊಂಡು," ಓಹೋ, ಇಂದಿನ ಮ್ಯಾಚ್ ನಲ್ಲಿ ನೀವು ವಿನ್ನರ್ಸ್ ಅಂತ ಕಾಣುತ್ತದೆ. ಕಂಗ್ರಾಚುಲೇಶನ್ಸ್ " ಎಂದೆ


ಅಷ್ಟಕ್ಕೆ ಅವರು ಸಂತೋಷದಿಂದ ನನ್ನನ್ನು ಬಸ್ಸಿನಿಂದ ಇಳಿಸಬೇಕೆಂದು ಗಲಾಟೆ ಮಾಡುತ್ತಿದ್ದವರಿಗೆ ಸುಮ್ಮನಿರಲು ಹೇಳಿ, "ಅಮ್ಮಾ, ನೀವು ಎಲ್ಲಿಗೆ ಹೋಗಬೇಕು" ಅಂತ ಕೇಳಿದರು. ಅಷ್ಟೇ ಸಾಕಾಗಿತ್ತು ನನಗೆ. ಅವರ ಕರಳು ನೀರಾಗೋ ಹಾಗೆ ಅಳುತ್ತಾ, " ನನ್ನ ಅಕ್ಕನಿಗೆ ತುಂಬಾ ಸೀರಿಯಸ್ಸಾಗಿದೆ. ನಾಳೆ ಆಪರೇಷನ್ ಬೇರೆ ಇದೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ" ಅಂತ ನಾನು ಹೇಳಿದ್ದೇ ಅವರಲ್ಲಿ ಒಂದಿಬ್ಬರು ಎದ್ದು ನನಗೆ ಜಾಗ ಮಾಡಿಕೊಟ್ಟು " ಅಮ್ಮಾ ಅಳಬೇಡಿ, ಕೂತ್ಕೊಳ್ಳಿ. ನೀವು ಯಾವ ಆಸ್ಪತ್ರೆಗೆ ಹೋಗಬೇಕು ಹೇಳಿ. ನಿಮ್ಮನ್ನು ಅಲ್ಲಿಗೆ ಮುಟ್ಟಿಸುತ್ತೇವೆ" ಎಂದು ಹೇಳಿದರು. ಮಂಗಳೂರು ಬರುವವರೆಗೂ ಅವರ ಹಾಡು, ಕುಣಿತ ನಡೆದೇ ಇತ್ತು. "ತಾರಾ ನರ್ಸಿಂಗ್ ಹೋಮ್" ಬಂದಮೇಲೆ, ನನ್ನನ್ನು ಕೆಳಗಿಳಿಸಿ, ನನ್ನ ಸಾಮಾನುಗಳನ್ನೆಲ್ಲಾ ಒಳಗೆ ತಂದಿಟ್ಟು, " ಅಮ್ಮಾ , ಹೋಗಿ ಬರ್ತೇವೆ. ನಿಮ್ಮ ಅಕ್ಕನಿಗೆ ಬೇಗ ಗುಣವಾಗಲಿ" ಎಂದು ಹೇಳೀ ಹೊರಟುಹೋದರುಆಗ ನನಗೆ, "ಹೆಣ್ಣಿನ ಕಣ್ಣೀರಿಗೆ ಕರಗದೇ ಇರುವವರುಂಟೆ" ಎನ್ನುವ ಮಾತು ನಿಜವೆನಿಸಿತು

 


.


.


 


.



 

Rating
No votes yet

Comments