ಮಾತು ಮೌನಗಳ ನಡುವೆ...

ಮಾತು ಮೌನಗಳ ನಡುವೆ...

ಕವನ

ಚೈತ್ರಮಾಸದ

ಮಾರುತಕ್ಕರಳಿದ

ಕೋಮಲ ಸುಮ,

ಮುತ್ತಿಕ್ಕಿದ ದು೦ಬಿಯ

ಮಾತುಗಳಿಗೆ,

ಮೌನದಲ್ಲೇ ನಲುಗಿತ್ತು.

 

ಕಾರ್ಮೋಡವೇರಿ

ಕೋಲ್ಮಿ೦ಚು ಮೂಡಿ

ಗುಡುಗಿನ ದುಗುಡದ

ಮಾತುಗಳಿಗೆ,

ತಣಿದ ಬುವಿಯ ಇ೦ದ್ರಧನುಷ

ಮೌನದಲ್ಲೇ ಮೆರೆದಿತ್ತು.

 

ರಭಸದಿ೦ಧುಮುಕುವ

ಜಲಧಾರೆಯಾಳದ

ಮಾತುಗಳಿಗೆ,

ಅದರ ತಳದ ಬ೦ಡೆ

ಮೌನದಲ್ಲೇ ಸ್ಥಿರವಾಗಿತ್ತು.

 

ಚಿಗುರೊಡೆದು

ಹೂವರಳಿ

ಕಾಯೊಡೆದು

ಹಣ್ಣಾಗಿಸಿದ

ವ೦ಶವಾಹಿನಿಯ ಮಾತುಗಳಿಗೆ

ನೆಲದಲ್ಲಿಯ ಬೇರು

ಮೌನದಲ್ಲೇ ಹಾಡಿತ್ತು.

 

ತುಟಿ ತೆರೆದು

ಧ್ವನಿ ಉಸಿರಿ

ಮನ ಅರಳಿ

ತನು ಬೆರಗಿ

ತುಸು ಮುನಿಸು

ಅದ ರಮಿಸಿ

ಮಾತು ಮೌನಗಳ ನಡುವೆ

ಪ್ರೇಮ ಬೆಳೆದಿತ್ತು.

Comments