ನಿಶ್ಶಬ್ಧ ಯಂತ್ರ

ನಿಶ್ಶಬ್ಧ ಯಂತ್ರ

ಕವನ

ಇದಕೆ ಇಲ್ಲ ಸರಿಸಮ
ಹಲವು ಭಾಗಗಳ ಸಮಾಗಮ
ಇದರ ವಿಶೇಷ ವೇಗ
ಬಳಸುವವರಿಗೆ ಇದು ಸುಯೋಗ

ಕೆಲಸ ಮಾಡಬಲ್ಲದು ಹಗಲು-ಇರುಳು
ಆಗುವರು ಇದಕೆ ಮರುಳು
ನೋಡುತ್ತಿದ್ದರೆ ಕಳೆಯುವುದು ಸಮಯ
ಆನಂದಕೆ ಇಲ್ಲ ಯಾವುದೇ ಪ್ರಮೇಯ

ಬಳಕೆಯಿದೆ ಇದು ಸರ್ವತ್ರ
ಬಳಸಿಕೊಂಡು ಹಲವು ತಂತ್ರ
ಬಿಡಿಸುವುದು ವಿವಿಧ ಸೂತ್ರ
ಅದುವೇ ನಮ್ಮಯ ಗಣಕ-ಯಂತ್ರ

Comments