ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು

ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು

ಕವನ

ಪ್ರೀತಿಯ ಸುಖವೇನೆಂದು ಅರಿಯದೆ

ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ

ಪ್ರೀತಿಯ ಪರಿಚಯವ ಮಾಡಿಸಿದೆ

ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ...

 

ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು


ಮನವ ಆವರಿಸಿಕೊಂಡಿರುವುದು ಗೆಳತಿ

ಕಪಟವಿಲ್ಲದ ಆ ನಿನ್ನ ನಗುವಿನಿಂದ

ರಂಗು ರಂಗಾಗಿದೆ ನನ್ನೀ ಮನವು..


 

ನಿನ್ನ ಮುದ್ದಾದ ಮುಗ್ಧ ನಗುವಿಗೆ

ಬೆಲೆ ಕಟ್ಟಲು ಸಾಧ್ಯವೇ ಗೆಳತಿ

ಈ ಹೃದಯ ನಿಲ್ಲುವುದು ನಿನ್ನ

ಮೊಗದಲಿ ಆ ನಗು ನಿಂತರೆ

Comments