ಕವಿ

ಕವಿ

ಕವನ
ಏಳುಬೀಳಿನ ಬದುಕ ಕಥೆಯಾಗಿಸಿದವನು. ಕಥೆಯನ್ನೇ ಬದುಕಾಗಿಸಿಕೊಂಡವನು.ವಾಸ್ತವವ ಕಲ್ಪಿಸಿಕೊಳ್ಳುವನು. ಕಲ್ಪನೆಗಳ ವಾಸ್ತವಿಕರಿಸಿದನು. ತನ್ನ ಭಾವಗಳ ಜಗಕ್ಕೆ ಹಂಚಿದವನು. ಜಗದ ಭಾವಗಳ ತನ್ನದೆಂದುಕೊಂಡವನು. ಏಕಾಂತ ಮೌನದಲಿ,ನಿತ್ಯ ವಿಹರಿಸುವನು, ಭಾವಗಳ ಜೊತೆಗೂಡಿ ಹರಟೆ ಹೊಡೆಯುವನು.ಅಲೆವ ಭಾವಗಳಿಗೆ ರೂಪ ಕೊಟ್ಟವನು. ನಿದ್ರೆಯಲ್ಲಿ ಮೈಮರೆತು ಮಲಗಿದರೂನು, ಕವಿಯೊಳಗಿನ ಕವಿ ಮಾತ್ರ ಎಚ್ಚರವೇ ಇರುವನು.

Comments