ಸ್ನೇಹ

ಸ್ನೇಹ

ಕವನ

ಬಾಳ ಬಾನ೦ಗಳದಿ
ಸ್ನೇಹ ಚ೦ದ್ರಮ ಮೂಡಿ
ಹರುಷದ ಹೊನಲ ಪಸರಿಸಿ
ಬಾಳ ಬೆಳಗುವುದೋ ಮನುಜ
ಇದುವೇ ಪರಮ ನಿಜ..

ಸ್ನೇಹಲೋಕದಿ ಮೋಸವಿಲ್ಲ
ಮೇಲು ಕೀಳೆ೦ಬ ಬೇಧವಿಲ್ಲ!
ವ೦ಚನೆ ದುರ್ಮಾರ್ಗತನವಿಲ್ಲ
ಇದ ಅರಿಯದವಗೆ ಬೆಲೆಯಿಲ್ಲ!!

ಸ್ನೇಹವಿದುವೆ ಸಾಗರ
ಬಾಳಿನ ಹ೦ದರ!
ಇದು ದೇವರ ವರ
ನೆಟ್ಟು ಬೆಳೆಸೋ ಈ ಮರ!!

ಸ್ನೇಹ ಬಾಳಿನ ಮೆಟ್ಟಿಲು
ಮನದ ಬಾಗಿಲ ತಟ್ಟಲು!
ದ್ರೋಹ ಭಾವವ ಅಟ್ಟಲು
ದೇವ ಪಾದವ ಮುಟ್ಟಲು!!

 

ಬಾಳಿನಲಿರಲಿ ಸ್ನೇಹದ ಒಲುಮೆ
ಅದಾಗಲಿ ಸ೦ತಸದ ಕುಲುಮೆ
 

Comments