ಜಗತ್ತು ಅಂತ್ಯವಾಗುತ್ತದೆಂದರೆ ಅಲ್ಲಿಯವರೆಗೂ ಬದುಕಿರುತ್ತೇವೆ ಎಂದರ್ಥಃ ಗಾದೆಗೊಂದು ಗುದ್ದು--೭೫

ಜಗತ್ತು ಅಂತ್ಯವಾಗುತ್ತದೆಂದರೆ ಅಲ್ಲಿಯವರೆಗೂ ಬದುಕಿರುತ್ತೇವೆ ಎಂದರ್ಥಃ ಗಾದೆಗೊಂದು ಗುದ್ದು--೭೫

 (೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ!

(೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾವು ಭವಿಷ್ಯದಲ್ಲಿ ಔಷದದ ರೂಪದಲ್ಲಿ ಭಕ್ಷಿಸುತ್ತೇವೆ!

(೩೮೩) ೨೦೧೨ರಲ್ಲಿ ಜಗತ್ತು ಅಂತ್ಯವಾಗಲಿದೆ ಎಂಬುದು ನಮ್ಮ ಭೀತಿ. ಇದರ ಒಳಾರ್ಥವೇನೆಂದರೆ ಅದನ್ನು ವೀಕ್ಷಿಸಲು ಅಲ್ಲಿಯವರೆಗೂ ನಾವು ಬದುಕಿರುತ್ತೇವೆಂಬ ಆಶಾವಾದ!

(೩೮೪) ಜಗಜ್ಜಾಹೀರಾಗಿರುವ ಗುಟ್ಟುಗಳ ಬಗ್ಗೆ ಮಾತ್ರ ತಾನು ವಾಚಾಳಿ ಎಂಬ ಸತ್ಯವನ್ನು ಗುಟ್ಟಾಗಿರಿಸುವ ಮುತ್ಸದ್ಧಿಯನ್ನು ಬಹಿರ್ಮುಖಿ ಎನ್ನುತ್ತೇವೆ. ಆ ಗುಟ್ಟನ್ನು ತನಗೆ ಮಾತ್ರ ಬಹಿರಂಗಗೊಳಿಸುವವನನ್ನು ಅಂತರ್ಮುಖಿ ಎನ್ನುತ್ತಾರೆ. 

(೩೮೫) ಎಂದೋ ಕಂಡ ಕನಸು ಒಂದೊಮ್ಮೆ ನನಸಾದ ಪಕ್ಷದಲ್ಲಿ ಆ ಕ್ಷಣದಿಂದ ನೀವು ವಾಸ್ತವದಿಂದ ದೂರವಾಗುತ್ತೀರ. ಆ ನಂತರದ್ದೆಲ್ಲ ಕೇವಲ ಆ ಕನಸಿನ ವಿಸ್ತೃತ ರೂಪ ಅಥವ ಮುಂದುವರಿಕೆಯಷ್ಟೇ!

Rating
No votes yet

Comments