ನಿರೀಕ್ಷೆ

ನಿರೀಕ್ಷೆ

ಕವನ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದಾಗ,
ಮೈಯೆಲ್ಲಿ ಮಿಂಚಿನ ಸಂಚಾರ.
ಹೃದಯದಲ್ಲಿ ಪ್ರೇಮದ,
ಮಧುರವಾದ ಸಿಂಚನ.
ಇದೇನಾ ಪ್ರೀತಿಯ 
ಆಗಮನದ ಸೂಚನೆ?
ಮತ್ತೆ ಮತ್ತೆ ನಿನ್ನನ್ನು
ನೋಡುವ, ಮಾತನಾಡುವ ಆಸೆ.
ಎಂದೂ ಕಾಣದ ಬದಲಾವಣೆ 
ಇಂದೇಕೆ??.
ಎಲ್ಲೋ ಕಳೆದು ಹೋಗಿದೆ 
ನನ್ನೀ ತನು ಮನ.
ಎಷ್ಟು ಹುಡುಕಿದರೂ ಸಿಗುತಿಲ್ಲ
ಹೃದಯ,ಕಳೆದು ಹೋಗಿದೆ
ಯಾರದೋ ಒಲವಿನ  ನೀರಿಕ್ಷೆಯಲ್ಲಿ.
 

Comments