ಮೂಢ ಉವಾಚ -70
ಅಂಗವಿಕಲ
ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ|
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂಗವಿಕಲನಾಗದಿರೆಲೋ ಮೂಢ||
ಕೋಪದ ಫಲ
ಕೋಪದಿಂದ ಜನಿಪುದಲ್ತೆ ಅವಿವೇಕ
ಅವಿವೇಕದಿಂದಲ್ತೆ ವಿವೇಚನೆಯು ಮಾಯ |
ವಿವೇಕ ಮರೆಯಾಗೆ ಬುದ್ಧಿಯೇ ನಾಶ
ಬುದ್ಧಿಯಿರದಿದ್ದೇನು ಫಲ ಮೂಢ ||
****************************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ -70
In reply to ಉ: ಮೂಢ ಉವಾಚ -70 by drmulgund
ಉ: ಮೂಢ ಉವಾಚ -70