ಯಾರು ಮಿಗಿಲು? ಹೇಳಿದೋರೆ ಜಾಣರು.

ಯಾರು ಮಿಗಿಲು? ಹೇಳಿದೋರೆ ಜಾಣರು.

ಇದು ಕಂಪ್ಯೂಟರ್ ಯುಗ
ಕಂಪ್ಯೂಟರ್ ಹಿಂದಿದೆ ಇಂದಿನ ಜನಾಂಗ
ಆಗಿಹುದು ’ಅಬಾಕಸ್’ ನ ವಿಕಸಿತ ರೂಪ
ಸಿ ಪಿ ಯು ಮಾನವನ ಮೆದುಳಿನ ಪ್ರತಿರೂಪ

ವೈಜ್ಞಾನಿಕ, ವಿದ್ಯುತ್ ಉಪಕರಣವೊಂದೇ ಅಲ್ಲ
ಅಚ್ಚರಿಯೆನಿಸುತ್ತಿದೆ ಸೌಲಭ್ಯ ಯಾವುದಿಲ್ಲ
ಎಲ್ಲಾ ರಂಗಗಳಲ್ಲಾಗುತ್ತಿದೆ ಅಧಿಕ ಬಳಕೆ
ನಿಜವಾಗಿ ವಿಜ್ಞಾನವಿತ್ತ ಹೆಮ್ಮೆಯ ಕಾಣಿಕೆ.

ಮೊದಲಾಗುತಿತ್ತು ಕಛೇರಿಗಳಲ್ಲಿ ಉಪಯೋಗ
ಕಾಲಿಟ್ಟಿದೆ ಮನೆಯೊಳಗೂ ಈಗ
ಆಟ ಚಿತ್ರಕಲೆಗೆಂದು ಕುಳಿತರೆ ಕಂಪ್ಯೂಟರ್ ಮುಂದೆ
ಬೇಕಿಲ್ಲ ಮಕ್ಕಳಿಗೆ ಊಟ, ಓದು, ನಿದ್ರೆ

ಕೇಳಿದರೆ ಬೇಕಾದ್ದನ್ನು ಕೀಲಿಮಣೆ ಮೂಲಕ
ಕೊಡುವುದುತ್ತರ ಮಾನಿಟರ್ ಮೂಲಕ
ಬೆರಳಚ್ಚು, ಟೇಪ್ ರೆಕಾರ್ಡರ್ ಗಳಿಗೆ ಟಾಟಾ ಹೇಳಿಹುದು
ಜೋಡಿಸಿಕೊಂಡರೆ ಪ್ರಿಂಟರ್ ಮುದ್ರಿಸಲೂಬಹುದು

ಅಳವಡಿಸಿಕೊಂಡರೆ ಅಂತರ್ಜಾಲ ಸೌಲಭ್ಯ
ವಿಶ್ವದ ಎಲ್ಲಾ ಮಾಹಿತಿ ನಿಮಿಷದಲ್ಲಿ ಲಭ್ಯ
ಕಳಿಸಿದರೆ ವಿದ್ಯುನ್ಮಾನ ಸಂದೇಶ
ತಲುಪಲು ಸಾಕು ಒಂದೇ ನಿಮಿಷ

ಮಾನವ ಸಂಪನ್ಮೂಲ ಹೆಚ್ಚಿದ್ದಲ್ಲಿ ತಂದರು ಬೇಗೆ
ಬೇಗೆಗಿಂತ ಪ್ರಯೋಜನವೇ ಹಲವು ಬಗೆ
ಬೆರಗುಗೊಳಿಸುತ್ತಿಹುದು ತೋರಿಸಿ ವಿಶ್ವರೂಪ
ಸೃಷ್ಟಿಸಿದ ಮಾನವ ನಿಜಕ್ಕೂ ದೊಡ್ಡ ಭೂಪ.
 

Rating
No votes yet