ನನಸಾದ ಅಭಿಮಾನಿಗಳ ಕನಸು
ಕೋಟ್ಯಾಂತರ ಅಭಿಮಾನಿಗಳ ಕನಸು ನೆನ್ನೆ ನಡೆದ ಭಾರತ ಪಾಕ್ ಪಂದ್ಯದಲ್ಲಿ ನನಸಾಗಿದೆ. ಅಪಾರ ನಿರೀಕ್ಷೆ ಹುಟ್ಟಿಸಿದ್ದ ೨೦೧೧ ರ ವಿಶ್ವಕಪ್ ಎರಡನೇ ಉಪಾಂತ್ಯ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ೧೯೮೩, ೨೦೦೩ ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ಈಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿದೆ. ನೆನ್ನೆ ನಡೆದ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡರು ನಿಯಮಿತವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ನಿರೀಕ್ಷಿತ ಮೊತ್ತ ತಲಪದ ಭಾರತ ತಂಡ ೨೬೦ ರನ್ಗಳಿಗೆಲ್ಲ ತನ್ನ ಆಟವನ್ನು ಮುಕ್ತಾಯಗೊಳಿಸಿದಾಗ ಸಹಜವಾಗಿ ಭಾರತ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಬೇಸರ ಮೂಡಿತ್ತು.
ನಂತರ ಆಡಲು ಇಳಿದ ಪಾಕಿಗಳು ಮೊದಮೊದಲು ಚೆನ್ನಾಗಿ ಆಡಿದರಾದರೂ ಕೊನೆ ಕೊನೆಯಲ್ಲಿ ರನ್ ಸರಾಸರಿ ಹೆಚ್ಚಿ, ನಿರಂತರವಾಗಿ ವಿಕೆಟ್ ಕಳೆದುಕೊಂಡು ೨೩೧ ರನ್ ಗಳಿಗೆ ಸರ್ವಪತನ ಕಂಡ ತಕ್ಷಣ ಇಡೀ ಭಾರತದೆಲ್ಲೆಡೆ ಸಂಚಲನ ಉಂಟಾಯಿತು. ಭಾರತ ತಂಡ ವಿಶ್ವಕಪ್ ಗೆದ್ದಷ್ಟೇ ಸಂಭ್ರಮಿಸಿದರು.(ಸಂಭ್ರಮಿಸಿದೆವು). ಎಲ್ಲೆಡೆ ಶಿಳ್ಳೆಗಳು, ಕೇಕೆಗಳು, ಬೈಕ್ ರಾಲಿ ಗಳು, ಪಟಾಕಿ ಸಿಡಿಸುವುದು, ಬೀದಿಗಳಲ್ಲಿ ನೃತ್ಯ, ಸಿಹಿ ಹಂಚುವುದು ಒಂದು ರೀತಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅದೇ ಭಾರತ ಮತ್ತು ಪಾಕ್ ಪಂದ್ಯಕ್ಕಿರುವ ವಿಶೇಷತೆ.
ಹೇಗೋ ಫೈನಲ್ ಗೆ ಬಂದಿದ್ದಾಯಿತು. ಶನಿವಾರ ಮುಂಬೈ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕ ತಂಡವನ್ನು ಎದುರಿಸಲಿರುವ ಭಾರತ ತಂಡ ೧೧೦ ಕೋಟಿ ಭಾರತೀಯರ ಕನಸನ್ನು ನನಸು ಮಾಡುತ್ತಾರ ಎಂದು ಕಾದು ನೋಡಬೇಕು.
ಭಾರತ ತಂಡ ಜಯಶಾಲಿಯಾಗಲಿ. ಜೈ ಹಿಂದ್ ವಂದೇ ಮಾತರಂ
Rating
Comments
ಉ: ನನಸಾದ ಅಭಿಮಾನಿಗಳ ಕನಸು
In reply to ಉ: ನನಸಾದ ಅಭಿಮಾನಿಗಳ ಕನಸು by kavinagaraj
ಉ: ನನಸಾದ ಅಭಿಮಾನಿಗಳ ಕನಸು