ದೋನಿ ಏನು ಮಾಡಲಿ ?
ದೋನಿ ಏನು ಮಾಡಲಿ ?
ಚಿತ್ರ ೧ :
ಸಚಿನ್ : ಏನು ಮಾಡಲಿ ದೋನಿ ನನಗೇಕೊ ಗೊಂದಲ ಎನಿಸುತ್ತಿದೆ
ದೋನಿ: ಏಕೆ ಸಚಿನ್ ಬ್ಯಾಟಿಂಗ್ ಕಷ್ಟವಾಗುತ್ತಿದೆಯ ಎಲ್ಲರು ಆಗಲೆ ಔಟ್ ಆಗುತ್ತಿದ್ದಾರೆ
ನೀವೊಬ್ಬರೆ ಆದಾರ
ಸ: ಅದಲ್ಲ ದೋನಿ ನಾನಗಲೆ ೮೦ ರ ದಾಟಿ ಆಯಿತು ಸೆಂಚುರಿ ಹೊಡೆಯಲು ಭಯವಾಗುತ್ತೆ
ದೋ: ಏಕೆ
ಚಿತ್ರ ೨
ಸ: ಅದೇ ದೋನಿ ನಾನು ಸೆಂಚುರಿ ಹೊಡೆದರೆ ಭಾರತ ಸೋಲುತ್ತೆ ಅಂತ ಎಲ್ಲ ಪುಕಾರು ಹಬ್ಬಿಸಿ ಬಿಟ್ಟಿದ್ದಾರೆ
ದೋ: ನಾನು ಅದೇ ಯೋಚಿಸುತ್ತಿದ್ದೆ ಅದು ಪುಕಾರು ಅನ್ನುವದಕ್ಕಿಂತ ಒಂದು ನಂಬಿಕೆ ಅನ್ನಿಸುತ್ತೆ
ಸ: ಅದು ನಿಜವಿರ ಬಹುದಾ? ನಾನೇನು ಮಾಡಲಿ ದೋನಿ ೯೦ ರ ನಂತರ ಔಟ್ ಆಗಬೇಕಾ?
ದೋ: ಅದು ಕಷ್ಟ ಸಚಿನ್ ನೀವು ೯೦ ದಾಟಿದರೆ ಪಾಕಿಸ್ತಾನಿಯರೆ ನಿಮ್ಮ ಕೈಲಿ ಸೆಂಚುರಿ ಹೊಡೆಸಿಬಿಡುತ್ತಾರೆ
ಮೊದಲೆ ಅವರು ಹೇಳಿದ್ದಾರೆ ಸಚಿನ್ ಶತಕ ವ್ಯರ್ಥವಾಗುತ್ತದೆ ಅಂತ ಇದೊಂದು ಮೈಂಡ್ ಗೇಮ್
ಸ: ಹಾಗಾದರೆ ನಾನು ೯೦ ದಾಟೋದು ಬೇಡವ ?
ದೋ: ನಾನು ಅದನ್ನು ಹೇಗೆ ಹೇಳಬಲ್ಲೆ ಸಚಿನ್ , ನಿಮ್ಮ ನಿರ್ದಾರ |
ಚಿತ್ರ ೩ :
ದೋ : ಸಾರಿ ಸಚಿನ್ ನಿಮ್ಮ ೧೦೦ ನೆ ಶತಕ ತಪ್ಪಿ ಹೋಯಿತು
ಸ: ಪರವಾಗಿಲ್ಲ ದೋನಿ ನನಗೆ ದೇಶ ಗೆಲ್ಲುವುದೆ ಮುಖ್ಯ
ನನ್ನ ಶತಕ ಮುಂದಿನ ಪಂದ್ಯದಲ್ಲಿ ಹೊಡೆಯುತ್ತೇನೆ
ದೋ : ನೀವು ತುಂಬಾ ದೊಡ್ಡವರು ಸಚಿನ್....
ಗೆಳೆಯರೆ ಇದೊಂದು ಕಲ್ಪನ ಸಂಭಾಷಣೆ. ಆದರಿಂದ ಗಂಭೀರವಾಗಿ ಪರಿಗಣಿಸಬೇಡಿ
ಚಿತ್ರಗಳೆಲ್ಲ internet ನಿಂದ download ಮಾಡಿರುವುದು