ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ

ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ

ಸ್ನೇಹಿತರೇ, ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಪ್ರಸ್ತುತ ಪರಿಸ್ಥಿತಿ, ಸವಾಲುಗಳು, ದೋಷಗಳು ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದು ಚರ್ಚಾಗೋಷ್ಠಿಯಲ್ಲ, ಸಮ್ಮೇಳನವೂ ಅಲ್ಲ. ಬದಲಾಗಿ ನಾವಿಲ್ಲಿ ಕೈಗೊಳ್ಳುವಂತಹ ತೀರ್ಮಾನಗಳು ಚಾಲ್ತಿಗೆ ಬರಬೇಕು. ನಾವು ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಏನಿದ್ದರೂ ಇದು ಕನ್ನಡದ ಸೇವೆ, ಇದು ನಮ್ಮ ಭಾಷೆಗೆ ಸಲ್ಲಬೇಕು. ಇದಕ್ಕಾಗಿ ನಿಮ್ಮ ಸಹಕಾರ ಬೇಕು. ಕನ್ನಡಕ್ಕಾಗಿ ತುಡಿಯುವ ಮನ ನಿಮ್ಮದಾಗಿದ್ದರೆ ಬನ್ನಿ... ನಾವೆಲ್ಲರೂ ಒಟ್ಟಾಗಿ ಸೇರೋಣ.. ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾನದಂಡದಗಳು ಇಂತಿವೆ: 1. ಉದಯೋನ್ಮುಖ ಬರಹಗಾರರು (ಬರವಣಿಗೆಯಲ್ಲಿ ಆಸಕ್ತಿಯುಳ್ಳವರು) ಮಾತ್ರ 1. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ 2. ಕನ್ನಡಕ್ಕಾಗಿ ತುಡಿಯುವ ಮನಸ್ಸು 3. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರಿವು 5. ಭಾಗವಹಿಸಲಿಚ್ಛಿಸುವವರು ಈ ಕೆಳಗಿನ ಪ್ರಶ್ನೆಗೆ 100 ಪದಗಳಿಗೆ ಮೀರದಂತೆ ಉತ್ತರಿಸಬೇಕು. ಪ್ರಶ್ನೆ: ಸಾಹಿತ್ಯಕ್ಕೆ ಓದು ಅಗತ್ಯವೇ? ಸಾಹಿತಿ ಆದವನಿಗೆ ಸಾಮಾಜಿಕ ಬದ್ಧತೆಗಳಿರಬೇಕೆ? ನಿಮ್ಮ ಉತ್ತರವನ್ನು ಏಪ್ರಿಲ್ 25ರ ಮೊದಲು sanakabrahma@gmail… ಈ ವಿಳಾಸಕ್ಕೆ ಕಳುಹಿಸಿ. ನಿಮ್ಮ ಮಿಂಚಂಚೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಮರೆಯದಿರಿ. ಈ ಕೂಟದಲ್ಲಿ ಭಾಗವಹಿಸಲು ಆಯ್ಕೆಯಾದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಆಹ್ವಾನವನ್ನು ಕಳುಹಿಸಲಾಗುವುದು.
Rating
No votes yet

Comments