ಯುಗಾದಿ ಹಬ್ಬದ ಶುಭಾಶಯಗಳು.
ಆತ್ಮೀಯ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಬನ್ನಿ ಬೇವು ಬೆಲ್ಲ ತಿನ್ನೋಣ. "ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ನಿಂಬಕಂದಳ ಭಕ್ಷಣಂ||"
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. . ತಮ್ಮೆಲ್ಲರ ಬಾಳು ಬಂಗಾರವಾಗಲಿ.