ಆಸೆಗೊಂದು ಕವನ

ಆಸೆಗೊಂದು ಕವನ

ಕವನ

ಕವಿಯತ್ರಿ ಆಗುವ ಆಸೆ

ಮನ ತುಂಬ ಮಹದಾಸೆ

 

ಪದಗಳಿಗೆ ಪದ ಪೋಣಿಸುವಾಸೆ

ಸ್ವರಗಳಿಗೆ ಸ್ವರ ಸೇರಿಸುವಾಸೆ

ಪ್ರಾಸಗಳ ಮದುವೆ ಮಾಡಿಸುವಾಸೆ

ಕವನ ಕಟ್ಟುವ ಮಹದಾಸೆ

ನನಗೆ ಕವಿಯತ್ರಿ ಆಗುವ ಆಸೆ

 

ಕನಸೆಲ್ಲ ನನಸಾಗಿಸುವಾಸೆ

ದಿನದಲ್ಲಿ ಚಂದ್ರನ ತೋರಿಸುವಾಸೆ

ಕಲ್ಪನೆಯ ಕಡಲಲ್ಲಿ ತೇಲಾಡುವಾಸೆ

ಕವನ ಕಟ್ಟುವ ಮಹದಾಸೆ

ನನಗೆ ಕವಿಯತ್ರಿ ಆಗುವ ಆಸೆ

 

ಬುವಿಯ ರೂಪ ವರ್ಣಿಸುವಾಸೆ

ಮೋಡದಲ್ಲಿ ಮನೆ ಕಟ್ಟುವಾಸೆ

ಸೂರ್ಯ ಚಂದ್ರರಲ್ಲಿ ಪ್ರೀತಿ ಹುಟ್ಟಿಸುವಾಸೆ

ಕವನ ಕಟ್ಟುವ ಮಹದಾಸೆ

ನನಗೆ ಕವಿಯತ್ರಿ ಆಗುವ ಆಸೆ

 

ನಯನಗಳ ಮಾತಿನಲಿ ಸ್ವರ್ಗ ತೋರಿಸುವಾಸೆ

ಮೌನವಾದ  ಬಂಡೆಯಲ್ಲಿ ಶಬ್ದ ಹೊರಡಿಸುವಾಸೆ

ಕುರುಡನಿಗೆ ಬಣ್ಣವ ಗುರುತಿಸುವಾಸೆ

 ಕವನ ಕಟ್ಟುವ ಮಹದಾಸೆ

ನನಗೆ ಕವಿಯತ್ರಿ ಆಗುವ ಆಸ

Comments