ಒಕ್ಕೊರಲಾಗಲಿ ವಂದೇ ಮಾತರಂ
ಒಕ್ಕೊರಲಾಗಲಿ ವಂದೇ ಮಾತರಂ
ಒಕ್ಕೊರಲಾಗಲಿ ವಂದೇ ಮಾತರಂ
ಮೊಳಗಿಸಿ ಭಾರತ ಒಕ್ಕಲರೇ ||
ವಂದೇ ಮಾತರಂ ವಂದೇ ಮಾತರಂ ||ಪ||
ಅಡಿ ಅಡಿ ಮಹಿಮೆಯ ನೆಲದೊಳಗಿಟ್ಟು
ಬಿಡದಿಹ ಛಲವನು ಮನದಲಿ ನೆಟ್ಟು
ಒಂದೇ ಭಾವದಿ ನಂಬಿಕೆ ಇಟ್ಟು
ಕುಂದಿನ ಕಿನಿಸನು ಹೊರಗಡೆ ಬಿಟ್ಟು ||೧||
ಒಕ್ಕೊರಲಾಗಲಿ ವಂದೇ ಮಾತರಂ
ಮೊಳಗಿಸಿ ಭಾರತ ಒಕ್ಕಲರೇ ||
ವಂದೇ ಮಾತರಂ ವಂದೇ ಮಾತರಂ ||ಪ||
ದುಸ್ತರ ಮತ್ಸರವೆಂಬುದ ತೊರೆದು
ದುಸ್ಸಹವೆನ್ನದೆ ಎಲ್ಲವ ತಿಳಿದು
ಒಕ್ಕತನವು ಗೆಲು ಮಾರ್ಗವದರಿತು
ಚೊಕ್ಕತನದಿ ಜಯಗೀತವನುಲಿದು ||೨||
ಒಕ್ಕೊರಲಾಗಲಿ ವಂದೇ ಮಾತರಂ
ಮೊಳಗಿಸಿ ಭಾರತ ಒಕ್ಕಲರೇ ||
ವಂದೇ ಮಾತರಂ ವಂದೇ ಮಾತರಂ ||ಪ||
ದೇಶ ಸಮಗ್ರತೆ ಶಾಶ್ವತವಿರಲಿ
ದ್ವೇಷಾಸೂಯೆಯ ಭಾವವಡಗಲಿ
ಎಲ್ಲೆಡೆ ಒಂದೇ ಭಾವವು ಇರಲಿ
ಬಲ್ಲಿದರೆನ್ನುವ ಖ್ಯಾತಿಯು ಬರಲಿ ||೩||
ಒಕ್ಕೊರಲಾಗಲಿ ವಂದೇ ಮಾತರಂ
ಮೊಳಗಿಸಿ ಭಾರತ ಒಕ್ಕಲರೇ ||
ವಂದೇ ಮಾತರಂ ವಂದೇ ಮಾತರಂ ||ಪ||
- ಸದಾನಂದ
Comments
ಉ: ಒಕ್ಕೊರಲಾಗಲಿ ವಂದೇ ಮಾತರಂ
In reply to ಉ: ಒಕ್ಕೊರಲಾಗಲಿ ವಂದೇ ಮಾತರಂ by raghumuliya
ಉ: ಒಕ್ಕೊರಲಾಗಲಿ ವಂದೇ ಮಾತರಂ