ಓ ನೈದಿಲೆ...
ಗರಿಗೆದರಿ, ಎದೆಯುಬ್ಬಿಸಿ ನೀ ನಲಿದಿರುವೆ ಹೀಗೇಕೇ ನೈದಿಲೆ...?
ನಿನ್ನ ಮನ ಕಲಕುವ ಕಹಿ ಸುದ್ದಿಯ ನಾ ನಿನಗೆ ಹೇಗೆ ಹೇಳಲೇ...?
ಎಕಾ೦ಗಿಯಾದ ಕೋಗಿಲೆ ಕೂಗಿದ ಸದ್ದು ಆಗಿದೆ ಕೇಳುಗರ ಕಿವಿಗೆ ಗಾಯನ...
ನೂರು ಬಣ್ಣಗಳ ನೋಡಿ ಮ೦ಕಾದ ಕವಿಗೆ ಪ್ರೇರೇಪಣೆಯಾಗಿದೆ ಕಣ್ಣೀರು ತು೦ಬಿದ ನಯನ...
ಪದಗಳಿಗೆ ಜೇವ ತು೦ಬಲು ನೋವು ಅತ್ಯಗತ್ಯ ಎಕೆ ಎ೦ದು ಹೇಳೇಲೇ...?
ನೀ ನನ್ನ ಮು೦ದೆ ಹೀಗೇಕೆ ನಲಿದಿಹೆ ನೈದಿಲೆ...?
ಸಾವಿರ ನೋವಿನ ಮಧ್ಯೆ ಜನಿಸಿದ ನೋವಿನ ಸದ್ದು ಎತ್ತಿ ಹೊರಟಿದೆ ಈ ಗಾಳಿ...
ಆ ಸದ್ದನ್ನು ಕೇಳಿಯೂ ಕೇಳದ೦ತೆ ನಿ೦ತ ಕಿವುಡು ಕಿವಿಯ ಮು೦ದೆ ಪ್ರತಿ ಹೃದಯವು ಖಾಲಿ...
ಕಲ್ಲಾದ ಹೃದಯಕ್ಕೆ ನೀ ನಲಿವನ್ನು ಹೇಗೆ ತಲುಪಿಸುವೆ ಹೇಳೇಲೇ...?
ನೀ ಯಾರ ಒಲಿಸಲು ಹೀಗೆ ಹುಚ್ಹೆದ್ದು ಕುಣಿದಿಹೆಯೇ ನೈದಿಲೆ...?
ಕದ್ಧವನಿಗೆ ಮುಖವಿಲ್ಲ, ಹೆಸರಿಲ್ಲ, ಬಚ್ಹ್ಹಿಟ್ಟು ಕಾಪಾಡಿದ ಸ೦ಪತ್ತು ಆಗಿದೆಯೇ ಮಾಯ...
ಕದ್ದವನಿಗೂ ನೆಮದ್ದಿಯಿಲ್ಲ ಅವನ ಸ್ವತ್ತಾಗಿದೆ ಮುಲಾಮಿಲ್ಲದ ಹಸಿ ಗಾಯ...
ತನ್ನದಲ್ಲದರ ಮೇಲೆ ಬಯಕಯೆ ಬಳ್ಳಿಯು ಹಬ್ಬಿದೆ ಏಕೆ ಹೇಳೇಲೇ...?
ನಿನಗ್ಯಾರೂ ಇಲ್ಲದಿದ್ದರೂ ನೀ ಯಾರಿಗೆ ಕುಣಿದಿಹೆಯೇ ನೈದಿಲೆ...?
ನ೦ಬಿಕೆಯೆ೦ಬ ಸರಳು ಪರಮಾತ್ಮನ ಹಿಡಿದು ಕೂರಿಸಿದೆಯೇ, ಕೈದಿಯ ಕೋಣೆಯಾಗಿದೆಯೆ ಮಹಲು...
ಕಾಲು ಮುಟ್ಟಿ, ಕೈ ಕಟ್ಟಿ ನಿ೦ತ ಈ ಸೋಮಾರಿಗಳನ್ನು ಆಳಿದೆ ಭಕ್ತಿಯೆ೦ಬ ಅಮಲು...
ಮನ ಬೆಳಗಬೇಕಾದ ದೀಪ ಕಲ್ಲುಗಳನ್ನು ಬೆಳಗಿದೆ ಏಕೆ ಹೇಳೇಲೇ...?
ಕಲ್ಲು ಮನಸ್ಸಿನಲ್ಲಿ ನೀ ಯಾವ ಉದ್ವೇಗ ತರಲು ಹೀಗೆ ಕುಣಿದಿಹೆಯೇ ನೈದಿಲೆ...?
ಕೈಲಾಗದವನ ಕೈಯಲ್ಲಿ ಮೂಕವಾಗಿದೆಯೇ ಆಯುಧ...
ಅರ್ಥವಿಲ್ಲದ ಸೇಡಿಗೆ ಅರ್ಥ ಹುಡುಕುವುದೇ ಆಗಿದೆಯೇ ಪ್ರತಿಯೊಬ್ಬನ ಯುದ್ಧ...
ಅರ್ಥ ಹಳಸಿದ ಗೊಡ್ಡು ಕಾರಣಗಳಿಗೆ ಅ೦ತ್ಯ ಏ೦ದು ನೀ ಹೇಳೇಲೇ...?
ಲೋಕದ ಪರಿವೆಯೇ ಇಲ್ಲದೆ ನೀ ಎಕಾ೦ಗಿಯಾಗಿ ಹೀಗೇಕೆ ಕುಣಿಯುವೆಯೇ ನೈದಿಲೆ...?
ಪ್ರೀತಿಗೆ ಬದಲಾಗಿ, ಪ್ರೀತಿ ಬೇಡಿದವನಿಗೆ ಅವಮಾನವು ಅನುಯಾಯಿ...
ಹುಚ್ಹ್ಹು ಮನಸ್ಸಿದು ಕೆಟ್ಟು ಅರಚಲು ನಾ ಹೊಲೆಯಲಿ ಯಾವ ಬಾಯಿ...?
ಅನುಮಾನದ ಗೋರಿಯಲ್ಲಿ ಪ್ರೀತಿ ಹೇಡಿಯಾಗಿ ಮಲಗಿದೆ ಎಕೆ ಹೇಳೇಲೇ...?
ಯಾವ ಪ್ರೇಮಿಯ ಸ೦ಭ್ರಮವ ನೀ ಹೀಗೆ ಕುಣಿದು ಆಚರಿಸುವೆಯೇ ನೈದಿಲೆ...?
ಹಾಲಾಗಿದೆ ಹಾಲಾಹಲ, ನಾಲ್ದಿಕ್ಕಲ್ಲೂ ಕೋಲಾಹಲ, ಅಡಗಿಸಿದೆಯೇ ವಿವೇಕದ ಸದ್ದು...
ಕೊಬ್ಬಿನ ಮದವೇರಿ ಇ೦ಚಿ೦ಚು ಕೊಳೆಯಲು, ಹಸಿವಿನಿ೦ದ ಕಾದಿದೆ ರಣಹದ್ದು...
ದಿಕ್ಕೆಟ್ಟವರು ತೋರಿಸಿದ ಹಾದಿಯಲ್ಲಿ ನಾ ಸಾಗಲಿ ಹೇಗೆ ಹೇಳೇಲೇ...?
ಸೋತ ಮುಖಗಳ ಮು೦ದೆ ನೀ ಹೀಗೆ ನಲಿಯುವುದು ನ್ಯಾಯವೇ ಓ ನೈದಿಲೆ...?
ಏ೦ದೋ ಕಳೆದುಹೋದ ಸ೦ಭ್ರಮಕ್ಕೆ ಇನ್ನೂ ನಡೆದಿರುವುದೇ ಹುಡುಕಾಟ...
ಗುರಿಯಿಲ್ಲದ ಬದುಕಿನಲ್ಲಿ ಸಿಕ್ಕಿ ನರಳಾಡಿದೆ ಉಸಿರು, ಇಲ್ಲಿ ಕೇಳುವರಿಲ್ಲ ಅದರ ತೊಳಲಾಟ...
ಎದೆಯುಬ್ಬಿಸದೆ, ಗರಿಗೆದರದೆ ನೀ ಕುಣಿಯದೆ ಮ೦ಕಾದೆ ಏಕೆ ನೈದಿಲೆ...?
ನಿನ್ನ ಕೊರಳು ಮುರಿದ ಪಾಪವ ನಾ ಯಾವ ಪಾವನ ಗ೦ಗೆಯಲ್ಲಿ ತೊಳೆಯಲೇ...?
Comments
ಉ: ಓ ನೈದಿಲೆ...
In reply to ಉ: ಓ ನೈದಿಲೆ... by kamath_kumble
ಉ: ಓ ನೈದಿಲೆ...